ಬೆಳ್ಳಿಪ್ಪಾಡಿಯಲ್ಲಿ ಗುಡ್ಡಕ್ಕೆ ಬೆಂಕಿ | ಒಂದು ಎಕ್ರೆ ಗುಡ್ಡೆ ಬೆಂಕಿಗೆ ಆಹುತಿ

ಪುತ್ತೂರು : ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಗುಡ್ಡೆಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆದಿದೆ.

ಇಲ್ಲಿನ ಬೆಳ್ಳಿಪ್ಪಾಡಿ ಕ್ರಾಸ್‌ನಲ್ಲಿರುವ ಲಲಿತಾ ಮಾದಪ್ಪ ಎಂಬವರಿಗೆ ಸೇರಿದ ಒಂದು ಎಕ್ರೆ ಗುಡ್ಡೆ ಬೆಂಕಿಗೆ ಆಹುತಿಯಾಗಿದೆ.

ಘಟನೆಯ ವಿಷಯವನ್ನು ಲಲಿತಾ ಮಾದಪ್ಪರವರ ಮನೆಯ ಎದುರು ಭಾಗದಲ್ಲಿರುವ ಕೋಡಿಂಬಾಡಿಯ ಉದ್ಯಮಿ ಅಶೋಕ್ ಕುಮಾರ್ ರೈಯವರು ಮೊದಲು ಗಮನಿಸಿದ್ದಾರೆ. ಅವರು ತಕ್ಷಣ ಬೆಂಕಿ ಬಿದ್ದಿರುವ ವಿಚಾರವನ್ನು ಲಲಿತಾರಿಗೆ ಮನೆಯವರಿಗೆ ತಿಳಿಸಿದ್ದಾರೆ. ಮತ್ತು ಆ ಮೂಲಕ ದೊಡ್ಡ ಪ್ರಮಾಣದ ಬೆಂಕಿಯ ಅಪಾಯವನ್ನು ತಪ್ಪಿಸಿದ್ದಾರೆ.

ಬಳಿಕ ಅಗ್ನಿಶಾಮಕ ದಳದವರು ಕೂಡಾ ಧಾವಿಸಿ ಬಂದಿದ್ದು ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದ್ದಾರೆ.

Comments are closed.