ಕೊಡಗಿನ ಜನತೆಗೆ ಮತ್ತೆ ಕೊರೋನಾತಂಕ | ತೊಲಗಿದ ಪಿಶಾಚಿ ಮತ್ತೆ ಇಣುಕಿತಾ ?

ನಿನ್ನೆ ತಾನೇ ಕೊಡಗು ಕೊರೋನಾ ಮುಕ್ತ ಅಂತ ಕೊಡಗು ಜನತೆ ಸಂಭ್ರಮಿಸಿದ್ದರು.

ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಈ ಖುಷಿಯನ್ನು ಜನತೆಯ ಮುಂದೆ ಹಂಚಿಕೊಂಡಿದ್ದರು. ಕೊರೋನಾ ಮುಕ್ತ 25 ಜಿಲ್ಲೆಗಳಲ್ಲಿ ಕೊಡಗು ಒಂದಾಗಿತ್ತು. ಆದರೆ ಇದೀಗ ಕೊಡಗಿನಲ್ಲಿ ಕೊರೊನದ ಭಯ ಮತ್ತೊಮ್ಮೆ ಶುರುವಾಗಿದೆ.

ಕೆಲ ದಿನಗಳ ಹಿಂದೆ ಕೊಡಗಿನಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ವೈರಸ್ ಕಾಣಿಸಿಕೊಂಡು, ಆ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದ.

ಆದರೆ ಇದೀಗ ಸ್ವಯಂ ಪ್ರೇರಣೆಯಿಂದ ಮತ್ತೆ ಜ್ವರವೆಂದು ಬಂದ ಅದೇ ವ್ಯಕ್ತಿಯನ್ನು ಐಸೋಲೇಶನ್ ವಾರ್ಡಿಗೆ ದಾಖಲಿಸಲಾಗಿದೆ.

ಆ ವ್ಯಕ್ತಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಗಾಗಿ ಜಿಲ್ಲಾಡಳಿತವು ವರದಿಯ ನಿರೀಕ್ಷೆಯಲ್ಲಿದೆ. ಆದರೂ ಆತಂಕದ ಅಗತ್ಯ ಇಲ್ಲವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ರವರು ಕೊಡಗು ಜನತೆಗೆ ತಿಳಿಸಿದ್ದಾರೆ.

ಅದು ಸಾಮಾನ್ಯ ಜ್ವರ ಇರುವ ಸಂಭವವೇ ಜಾಸ್ತಿ. ಆದರೂ ಜನತೆ ಆತಂಕಕ್ಕೆ ಬಿದ್ದಿದ್ದಾರೆ.

Comments are closed.