ಅಮರ ಸಂಘಟನೆಯಿಂದ ಅರ್ಹ ಫಲಾನುಭವಿಗಳಿಗೆ ಅಗತ್ಯ ವಸ್ತುಗಳ ವಿತರಣೆ

ಸುಳ್ಯ : ಪ್ರಸ್ತುತ ಜಗತ್ತನ್ನೇ ತನ್ನ ಬಾಹುಗಳಲ್ಲಿ ಹಿಡಿದು ಆಕ್ರಮಿಸಿ ನರಳಾಡಿಸುತ್ತಿರುವ ಕೋರೋನಾ ಮಹಾಮಾರಿಯ ವಿರುದ್ದ ಹೋರಾಡುವ ಮತ್ತು ಮುಂಜಾಗೃತ ಕ್ರಮವಾಗಿ ಅಮರ ಸಂಘಟನಾ ಸಮಿತಿ ಅಮರಮುಡ್ನೂರು ಇದರ ವತಿಯಿಂದ ಅರ್ಹರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಈಗಾಗಲೇ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದು ಇದೀಗ ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೋರೋಣ ಮಹಾಮಾರಿಯಿಂದ ತಮ್ಮ ಗ್ರಾಮದಲ್ಲಿ ಬಡತನವನ್ನು ಅನುಭವಿಸುತ್ತಿರುವ ಕುಟುಂಬಗಳನ್ನು ಆಯ್ದು ಅಕ್ಕಿ ಮತ್ತು ಅಗತ್ಯವಸ್ತುಗಳ ವಿತರಣೆಯು ಅಮರ ಸಂಘಟನಾ ಸಮಿತಿಯಿಂದ ನಡೆಯಿತು.

ಮೊದಲ ಹಂತದಲ್ಲಿ ಆರಿಸಿಕೊಂಡ ಕುಟುಂಬದ ವಿವರ :

1) ಕುಮಾರ ಸಿ.ಆರ್.ಸಿ ಪೈಲಾರು
2) ಸುಮಾ ದಾತಡ್ಕ
3) ಯಮುನ ಕೋಣಕಜೆ
4) ಚನಿಯ ಮೈರ್ಪಾಳ್ಳ
5) ರಮೇಶ ಕಂದಡ್ಕ
6) ಚನಿಯಾರು ಪದವು
7) ಸೀತಾ ಪದವು
8) ಚೆನ್ನು ಅಕ್ಕೋಜಿಪಾಲ್
9) ವಾರಿಜ ಪದವು ಇತರರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಮರ ಸಂಘಟನಾ ಸಮಿತಿಯ ಅಧ್ಯಕ್ಷರು, ಸರ್ವಸದಸ್ಯರು ಉಪಸ್ಥಿತರಿದ್ದರು

Comments are closed.