ದ.ಕ.ಜಿಲ್ಲೆಯ ಮತ್ತೊಬ್ಬ ಸೋಂಕಿತ, ಸುಳ್ಯದ ಅಜ್ಜಾವರದ ವ್ಯಕ್ತಿ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಯಾವುದೇ ಕೊರೊನಾ ಸೋಂಕು ಪತ್ತೆಯಾಗದೆ ಈ ಮೂಲಕ ಸತತ 8 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಇಲ್ಲದೆ ದೀರ್ಘ ನಿಟ್ಟುಸಿರುಬಿಡುವಂತಾಗಿದೆ.

ಇಂದು ಮಂಗಳೂರಿನ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯದ ಅಜ್ಜಾವರ ಮೂಲದ 34 ವರ್ಷ ಪ್ರಾಯದ ವ್ಯಕ್ತಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿ ಮನೆಯ ದಾರಿ ಹಿಡಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 12 ಮಂದಿ ಸೋಂಕಿತರಲ್ಲಿ ಇಲ್ಲಿಯತನಕ ಒಟ್ಟು 8 ಮಂದಿ ಡಿಸ್ಚಾರ್ಜ್ ಆಗಿದ್ದು, ಇನ್ನು ನಾಲ್ವರು ಚಿಕಿತ್ಸೆಯಲ್ಲಿದ್ದಾರೆ.

ಹೆಚ್ಚು ಕೋರೋನಾ ಸೋಂಕಿತರು ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಕೋರೋನಾ ಪ್ರಕರಣಗಳಲ್ಲಿ ಬೆಂಗಳೂರು, ಮೈಸೂರು ನಂತರ 3 ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಜಿಲ್ಲಾಡಳಿತದ  ಕಟ್ಟುನಿಟ್ಟಿನ ಕ್ರಮದಿಂದ ಮತ್ತು ಬುದ್ದಿವಂತ ಜನರ ಸೋಂಕು ಹರಡುವುದು ನಿಂತಿದ್ದು, 6ನೇ ಸ್ಥಾನಕ್ಕಿಳಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಜಿಲ್ಲೆಗಳಾದ ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲೂ ಸತತ ಎರಡು ದಿನಗಳಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಕೂಡ ದಕ್ಷಿಣ ಕನ್ನಡ ಜಿಲ್ಲೆಗೆ ಒಂದು ಶುಭಕರ ವಿಷಯ.

Comments are closed.