ಅಡಿಕೆ ಬೆಳೆಗಾರರ ನೆರವಿಗೆ ಬಂದ ಧರ್ಮಸ್ಥಳ ಪ್ರಾ.ಕೃ.ಸ.ಸಂಘ | ಅಡಿಕೆಗೆ ಅಡಮಾನ ಸಾಲ ವ್ಯವಸ್ಥೆ
ಧರ್ಮಸ್ಥಳ : ಕೋರೋನಾದಿಂದ ತೊಂದರೆಗೆ ಒಳಗಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಧರ್ಮಸ್ಥಳದ ಸದಸ್ಯರ ದೈನಂದಿನ ಅಗತ್ಯಗಳನ್ನು ಪೂರೈಸಲು ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ಅಡಮಾನ ಸಾಲದ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ.
ಲಾಕ್ ಡೌನ್ ಅವಧಿ ಮುಗಿಯುವವರೆಗೆ ರೈತ ಸದಸ್ಯರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಸಹಕಾರಿ ಸಂಘದ ಅಧ್ಯಕ್ಷರು, ಧರ್ಮಸ್ಥಳ ಕೇಂದ್ರ ಕಚೇರಿಯಲ್ಲಿ ಪ್ರತಿ ದಿನ 20 “ಎ” ದರ್ಜೆ ಸದಸ್ಯರಿಂದ ಗರಿಷ್ಟ 100 ಕೆ.ಜಿ., ಅಡಿಕೆ ಕಿಲೋ ಒಂದಕ್ಕೆ ತಲಾ 175/- ರೂಪಾಯಿಯಂತೆ ಅಡಮಾನ ಸಾಲ ನೀಡಲಾಗುವುದು.
ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರ ಬೇಡಿಕೆಯನ್ನು ಅನುಸರಿಸಿ ಸಂಘದ ಆಡಳಿತ ಮಂಡಳಿ, ಸಣ್ಣ ಪ್ರಮಾಣದಲ್ಲಿ ಸಂಘದ ಮುಖ್ಯ ಕಛೇರಿಯ ಗೋದಾಮುನಲ್ಲಿ ದಾಸ್ತಾನು ಇರಿಸಲಾಗುತ್ತದೆ. ಅಡಿಕೆಯ ಮೇಲೆ ಅಡಮಾನ ಸಾಲ ಬೇಕಾದ ಸದಸ್ಯರು ಹಿಂದಿನ ದಿನ ಸಂಘವನ್ನು ಸಂಪರ್ಕಿಸಿ ಟೋಕನ್ ನಂಬರ್ ಪಡೆದು ಮರು ದಿನ ಸಂಘದ ಗೋದಾಮುನಲ್ಲಿ ದಾಸ್ತಾನು ಇರಿಸಿದಲ್ಲಿ ಅಡಮಾನ ಸಾಲದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯಮಗಳು
- ಒಬ್ಬರಿಗೆ 100 ಕೆ.ಜಿ ಗರಿಷ್ಠ
- ಒಬ್ಬ ರೈತರಿಂದ 100 ಕೆ.ಜಿ ಅಡಿಕೆ ಮಾತ್ರ ಪಡೆಯಲಾಗುತ್ತದೆ.
- ಅಡಿಕೆಯನ್ನು ಸಂಘದ ಕೇಂದ್ರ ಕಛೇರಿಯಲ್ಲಿ ದಾಸ್ತಾನು ಇಡಬೇಕು.
- ದಿನಕ್ಕೆ 20 ಜನರಿಗೆ ಮಾತ್ರ ಸಾಲ ನೀಡಲಾಗುವುದು.
- “ಎ” ದರ್ಜೆ ಸದಸ್ಯರಿಗೆ ಮಾತ್ರ ಅವಕಾಶ.
- ಒಂದು ದಿನ ಮೊದಲು ಮುಂಗಡ ಟೋಕನ್ ಪಡೆದುಕೊಳ್ಳಬೇಕು
- ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಮುನ್ನೆಚ್ಚರಿಕೆಯಿಂದ ವ್ಯವಹರಿಸುವುದು.
ಹರಿದಾಸ್ ಗಾಂಭೀರ, ಅಧ್ಯಕ್ಷರು ಗ್ರಾ.ಪಂ ಚಾರ್ಮಾಡಿ