ಲಾಕ್‌ಡೌನ್ ಉಲ್ಲಂಘಿಸಿ ಬರ್ತ್‌ಡೇ ಆಚರಿಸಿದ ಬಿಜೆಪಿ ಶಾಸಕ ಮಸಾಲೆ ಜಯರಾಂ | FIR ದಾಖಲು

ತುಮಕೂರು : ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆಗಳು ಇದ್ದರೂ ಗುಬ್ಬಿ ತಾಲೂಕಿನ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಈ ನಿಯಮಗಳನ್ನು ಉಲ್ಲಂಘಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ.ಇದೀಗ ಪೊಲೀಸರು ಶಾಸಕರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಹುಟ್ಟು ಹಬ್ಬ ಆಚರಣೆ ಬೇಕಿತ್ತಾ? ಲಾಕ್‌ಡೌನ್ ಹಾಗೂ ದೇಶದ ಕಾನೂನುಗಳನ್ನ ಉಲ್ಲಂಘಿಸುವ ಇವರದ್ದು ಕೂಡ ದೇಶ ದ್ರೋಹದ ವರ್ತನೆಯಾಗಿದೆ.

ಅಭಿಮಾನಿಗಳಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಸಾಮೂಹಿಕವಾಗಿ ಬಿರಿಯಾನಿ ಊಟ ಸಹ ಹಾಕಿಸಿದ್ದಾರೆ. ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಇಡಗೂರು ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಈ ಜನ್ಮದಿನ ಆಚರಣೆ ನಡೆದಿದೆ. ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾಸಕರೇ ಬಿರಿಯಾನಿ ಬಡಿಸಿದ್ದಾರೆ.

ತುರುವೇಕೆರೆ ಶಾಸಕ ಮಸಾಲೆ ಜಯರಾಂ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ.ಆಡಳಿತ ರೂಡ ಪಕ್ಷ ಬಿಜೆಪಿ ಯ ಶಾಸಕರ ವರ್ತನೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಪಕ್ಷದವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಗಳು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಈ ಶಾಸಕನ ಮೇಲೆ ಯಾವ ಕ್ರಮ ಕೈಗೊಳ್ಲುತ್ತಾರೆ.ಮಸಾಲೆ ಜಯರಾಂ ವಿರುದ್ಧ ಯಾವ ರೀತಿಯ ಮಸಾಲೆ ಅರಿಯುತ್ತಾರೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.