ನರಿಮೊಗರು | ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಯುವಕಮಂಡಲ ನರಿಮೊಗರು ಇದರ ಮುಂದಾಳತ್ವದಲ್ಲಿ ದಾನಿಗಳಾದ ಅಗ್ನಿಶಾಮಕ ದಳದ ಉದ್ಯೋಗಿ ರುಕ್ಮಯ್ಯ ಗೌಡ ಪಂಜಳ ಮತ್ತು ಕೃಷಿ ಯಂತ್ರ ಮಾರಾಟಗಾರರಾದ ಸದಾಶಿವ ರೈ ಶಿಭರ ಇವರ ಕೊಡುಗೆಯೊಂದಿಗೆ ನರಿಮೊಗರು ಗ್ರಾಮದಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಆಶಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಯರಿಗೆ ಉಚಿತ ಆಹಾರ ಸಾಮಾಗ್ರಿಯನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಚಾಯತ್ ಸದಸ್ಯ ಪರಮೇಶ್ವರ ಭಂಡಾರಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಮತ್ತು ಸದಸ್ಯರು ಮತ್ತು ಗ್ರಾಮದ ಬೀಟ್ ಪೊಲೀಸ್ ಮತ್ತು ಯುವಕ ಮಂಡಲದ ಅಧಕ್ಷ ಸುಧಾಕರ ಕುಲಾಲ್ ಮತ್ತು ಸರ್ವ ಸದಸ್ಯರು ಮತ್ತು ದಾನಿಗಳು ಉಪಸ್ಥಿತರಿದ್ದರು

Leave A Reply

Your email address will not be published.