ಕೋಡಿಂಬಾಡಿ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಆವಶ್ಯಕ ಸಾಮಾಗ್ರಿ ವಿತರಣೆ

ದೇಶವು ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿದ್ದು,ದೇಶವು ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಉದ್ಯಮಿ,ರೈ ಎಸ್ಟೇಟ್ ಮಾಲಕ‌ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತೃತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜನಸಾಮಾನ್ಯರಿಗೆ ಅತ್ಯವಶ್ಯಕ ಆಹಾರ ಸಾಮಾಗ್ರಿಗಳ ಕಿಟ್ ನ್ನು ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ವಿತರಿಸಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು,ಜೀರ್ಣೋದ್ಧಾರ ಸಮಿತಿಯ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಮುರಳೀಧರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು,ಗ್ರಾ.ಪಂ ಉಪಾಧ್ಯಕ್ಷರಾದ ಬಾಬು ಗೌಡ ಭಂಡಾರದಮನೆ,ಜಗನ್ನಾಥ ಶೆಟ್ಟಿ ನಡುಮನೆ,ದೇವಾಲಯದ ವ್ಯವಸ್ಥಾಪಕ ಸಂತೋಷ್ ರೈ ಕೆದಿಕಂಡೆಗುತ್ತು,ಅಜಿತ್ ರೈ ಎಸ್ಟೇಟ್ ಉಪಸ್ಥಿತರಿದ್ದರು.

Leave A Reply

Your email address will not be published.