ಭಾರತದ ನೆರವನ್ನು ಎಂದಿಗೂ ಮರೆಯುವುದಿಲ್ಲ | ಹೈಡ್ರಾಕ್ಸಿಕ್ಲೋರೋಕ್ವಿನ್ ಡ್ರಗ್ ಪೂರೈಕೆ ನಿರ್ಧಾರಕ್ಕೆ ಟ್ರಂಪ್ ಹೊಗಳಿಕೆ
ಭಾರತದಿಂದ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಡ್ರಗ್ ಪೂರೈಕೆ ನಿರ್ಧಾರ ಕೈಗೊಂಡ ಭಾರತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮನಸಾರೆ ಅಭಿನಂಧಿಸಿದ್ದಾರೆ.
ಭಾರತದ ಈ ನಿರ್ಧಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಮಲೇರಿಯಾ ರೋಗಕ್ಕೆ ಬಳಸುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವೈನ್ ನ 2.9 ಕೋಟಿ ಡೋಸ್ ಗಳಷ್ಟು ಔಷಧವನ್ನು ಅಮೆರಿಕಾಗೆ ರಫ್ತು ಮಾಡಿದೆ.
ಕಳೆದ ನಾಲ್ಕು ದಿನಗಳಿಂದ ಈ ಔಷಧವನ್ನು ಅಮೆರಿಕಾಗೆ ಆದಷ್ಟು ಬೇಗ ಕಳಿಸುವಂತೆ ಅಮೇರಿಕಾ ಬೆನ್ನು ಬಿದ್ದಿತ್ತು. ಅದರಂತೆ ಭಾರತ ಅಮೆರಿಕಾಗೆ ನಿನ್ನೆ ಭಾರತವು ರಫ್ತು ಮಾಡಿತ್ತು.
” ಸ್ನೇಹಿತರು ಅಸಾಮಾನ್ಯ ಸಂದರ್ಭಗಳಲ್ಲಿ ಇನ್ನಷ್ಟು ಹೆಚ್ಚು ನಿಕಟವಾಗಿ ಸಹಕಾರ ನೀಡಬೇಕಾಗುತ್ತದೆ. ಹೈಡ್ರೋಕ್ಲೋರಿಕ್ವಿನ್ ಪೂರೈಕೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡ ಭಾರತ ಮತ್ತು ಭಾರತದ ನಾಗರಿಕರಿಗೆ ಧನ್ಯವಾದಗಳು. ಇದನ್ನು ನಾವೆಂದಿಗೂ ಮರೆಯುವುದಿಲ್ಲ. ಈ ನೆರವಿಗಾಗಿ ಭಾರತದ ಪ್ರಧಾನಿಗೆ ಧನ್ಯವಾದಗಳು. ಅವರ ಸದೃಢ ನಾಯಕತ್ವ ಭಾರತಕ್ಕಷ್ಟೇ ನೆರವಾಗುತ್ತಿಲ್ಲ. ಮಾನವೀಯ ಹೋರಾಟಕ್ಕೂ ಅವರು ನೆರವಾಗಿದ್ದಾರೆ ” ಎಂದು ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರು ಟ್ವೀಟ್ ಮಾಡಿದ್ದಾರೆ.
ಟ್ರಂಪ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ” ಡೊನಾಲ್ಡ್ ಟ್ರಂಪ್ ಅವರ ಮಾತುಗಳನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಇಂಥ ಸಂದರ್ಭಗಳು ಸ್ನೇಹಿತರನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತವೆ. ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಎಂದಿಗಿಂತಲೂ ಈಗ ಸದೃಢವಾಗಿದೆ. ಕೋರೋನಾ ವಿರುದ್ಧದ ಮಾನವೀಯ ಹೋರಾಟಕ್ಕೆ ಭಾರತ ತನ್ನಿಂದ ಸಾಧ್ಯವಾಗುವ ಎಲ್ಲ ರೀತಿಯ ನೆರವನ್ನೂ ನೀಡುತ್ತದೆ. ಕೋವಿಡ್–19 ಅನ್ನು ಎಲ್ಲರೂ ಒಟ್ಟಾಗಿ ಗೆಲ್ಲೋಣ ” ಎಂದು ಮರು ಟ್ವೀಟ್ ಮಾಡಿದ್ದಾರೆ.
Hello there, just became aware of your blog through Google,
and found that it’s really informative. I’m going to
watch out for brussels. I will be grateful if you continue this in future.
Lots of people will be benefited from your writing.
Cheers! Lista escape roomów