ಸವಣೂರು ಸೀತಾರಾಮ ರೈ ಅವರ ಬಾಡಿಗೆದಾರರಿಗೆ ತಿಂಗಳ ಬಾಡಿಗೆ ಮನ್ನಾ| ಕೆಲಸಗಾರರಿಗೆ ಕಿಟ್ ವಿತರಣೆ

Share the Article

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈರವರು ಎ.೭ ರಂದು ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವ ೨೦ ಮಂದಿ ಕೆಲಸಗಾರರಿಗೆ ನಿತ್ಯ ಬಳಕೆಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದರು.

ಅಲ್ಲದೇ ತಮ್ಮ ವಾಣಿಜ್ಯ ಸಂಕಿರಣ ದಲ್ಲಿ ಅಂಗಡಿ ಕೋಣೆಗಳನ್ನು ಬಾಡಿಗೆ ಪಡೆದುಕೊಂಡಿರುವವರಿಗೆ 35 ಮಂದಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡರು.

ಈ ಸಂದರ್ಭದಲ್ಲಿ ಸವಣೂರು ಸೀತಾರಾಮ ರೈ ರವರ ಪತ್ನಿ ಕಸ್ತೂರಿಕಲಾ ಎಸ್ ರೈ, ಸವಣೂರು ರಬ್ಬರ್ ಸೊಸ್ಯೆಟಿ ಕಾರ್ಯದರ್ಶಿ ಅಚ್ಚುತ ಎ, ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಪರಣೆ ಉಪಸ್ಥಿತರಿದ್ದರು.

Leave A Reply

Your email address will not be published.