ಅಂಡರ್ ವೇರ್ ಗೆ ಬಳಸುವ ಬಟ್ಟೆಯಿಂದ ಚೀನಾ ಪಾಕಿಸ್ತಾನಕ್ಕೆ ಮಾಸ್ಕ್ ತಯಾರಿಸಿ ಯಾಕೆ ಕಳುಹಿಸಿತ್ತು ಗೊತ್ತಾ?
ಅವಂತಿಕಾ, ಮಂಗಳೂರು
ಚೀನಾ ಪಾಕಿಸ್ತಾನ ಹಲವು ದಶಕಗಳಿಂದ ಗಳಸ್ಯ ಕಂಠಸ್ಯ. ಇಬ್ಬರೂ ಸಕತ್ ದೋಸ್ತುಗಳು. ಚೀನಾದಿಂದ ಪ್ರಯಾಣ ಬೆಳೆಸಿದ ಕೋರೋನಾ ರೋಗವು ಹಲವು ದೇಶಗಳಲ್ಲಿ ತನ್ನ ದಂಡಯಾತ್ರೆ ಯನ್ನು ಹೂಡುತ್ತಾ ಮುಂದುವರಿಯುತ್ತಿದೆ. ಈಗ ಪಾಕಿಸ್ತಾನದಲ್ಲಿ ಕೂಡ ಕೋರೋನಾ ರೋಗದ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ !
ತನ್ನ ದೇಶದಲ್ಲಿ ಕೋರೋನಾ ರೋಗವು ಉಲ್ಬಣವಾಗುತ್ತಿದ್ದಂತೆ ಪಾಕಿಸ್ತಾನವು ತನ್ನ ಮಿತ್ರ ದೇಶ ಚೀನಾದಿಂದ ರೋಗವನ್ನು ಎದುರಿಸಲು ಬೇಕಾದ ಮಾಸ್ಕ್ ಗಳನ್ನು, ವೆಂಟಿಲೇಟರ್ ಗಳನ್ನು, ಮತ್ತಿತರ ಅಗತ್ಯ ವಸ್ತುಗಳನ್ನು ಕಳಿಸಿಕೊಡುವಂತೆ ಆಗ್ರಹಿಸಿತ್ತು.
ಹಾಗೆ ಪಾಕಿಸ್ತಾನದ ಆಗ್ರಹದ ಮೇರೆಗೆ ಚೀನಾವು N 95 ಮಾಸ್ಕ್ ಗಳನ್ನು ಸಪ್ಲೈ ಮಾಡಿತ್ತು. ಆ ಮಾಸ್ಕ್ಗಳು ಪಾಕಿಸ್ತಾನ ತಲುಪಿದ ಕೂಡಲೇ ಅವುಗಳ ಬಾಕ್ಸ್ ಕೂಡಾ ಓಪನ್ ಮಾಡದೇನೆ ಪಾಕಿಸ್ತಾನದ ವಿವಿಧ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗಿತ್ತು.
ಆದರೆ ಆಸ್ಪತ್ರೆಯಲ್ಲಿ ಬಾಕ್ಸ್ ತೆರೆದು ನೋಡಿದ ಕೂಡಲೇ ಪಾಕಿಸ್ತಾನಿಯರ ಮೂಗಿಗೆ ವಿಚಿತ್ರ ವಾಸನೆ ಬಡಿದಿತ್ತು !!
ಏಕೆಂದರೆ ಆ N 95 ಮಾಸ್ಕ್ ಗಳನ್ನು ಚೀನಾದಲ್ಲಿ ಅಂಡರ್ ವೇರ್ ಗೆ ಬಳಸುವ ಬಟ್ಟೆಯಿಂದ ತಯಾರಿಸಲಾಗಿತ್ತು ! ಥೂ ನಾಥ !!
ಹಾಗಿದ್ದರೂ, ಪಾಕಿ ಪ್ರಧಾನಿ ಇಮ್ರಾನ್ ಖಾನ್ ಅವರು ಚೀನಾದ ಅಧ್ಯಕ್ಷರನ್ನು ವಿನೀತರಾಗಿ ” ಸಾರ್, ಯಾಕ್ಸಾರ್ ಚಡ್ಡಿ ಹೊಲಿಯೊ ಬಟ್ಟೆಯಲ್ಲಿ ಮೂಗು ಮುಚ್ಚುವ ಮಾಸ್ಕ್ ಕೊಟ್ಟಿದ್ದೀರಿ ? ಅಂದಿದ್ದಾರೆ.”
ಅದಕ್ಕೆ ಚೀನಾದ ಅಧ್ಯಕ್ಷ ” ಅಡ್ಜಸ್ಟ್ ಮಾಡ್ಕೊಳ್ಳಿ, ‘ ಡೋಂಟ್ ವರಿ ಮಾಡ್ಕೋಬೇಡಿ ‘ ; ಅಷ್ಟಕ್ಕೂ ನಾವು ಚಡ್ಡಿ ದೋಸ್ತ್ ಗಳಲ್ವಾ ? ” ಅಂದಿದ್ದಾರೆ.
ಇಮ್ರಾನ್ ಖಾನ್ ಗೆ ಕೂಡ ಹಾಗೆ ಅನ್ನಿಸಿದೆ. ಚಡ್ಡಿ
ದೋಸ್ತ್ ಗಳಾದ ಕಾರಣ ಚಡ್ಡಿ ಮೆಟೀರಿಯಲ್ ನಿಂದ ಹೊಲಿದು ಪ್ರೀತಿಯಿಂದ ಕಲಿಸಿರಬಹುದೆನ್ನುವುದು ಇಮ್ರಾನ್ ನಂಬಿಕೆ !!