ಅಮೆರಿಕಾದಲ್ಲಿ ಕೋರೋನಾ ಸೋಂಕಿತರನ್ನು ಟ್ರೀಟ್ ಮಾಡಲು ಮಲೇರಿಯಾ ಮಾತ್ರೆಗಳನ್ನು ಶೀಘ್ರ ಕಳಿಸಿ | ಮೋದಿಗೆ ಟ್ರಂಪ್ ಮನವಿ
ವಾಷಿಂಗ್ಟನ್ : ಕೋರೋನಾ ರೋಗಿಗಳಿಗೆ ಚಿಕಿತ್ಸೆಗೆ ಬಳಸಬಹುದಾದ ಆಂಟಿ ಮಲೇರಿಯಾ ಮನೆ ಮದ್ದು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸುವಂತೆ ಭಾರತದ ಪ್ರಧಾನಿ ಶ್ರಿ ನರೇಂದ್ರ ಮೋದಿ ಅವರಲ್ಲಿ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇಭವನದಲ್ಲಿ ಹೇಳಿದ್ದಾರೆ.
ಕೊರೊನಾ ವೈರಸ್ ಭೀತಿಯ ನಡುವೆ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ದೂರವಾಣಿ ಕರೆ ನಡೆಸಿತ್ತು. ಆ ದಿನ ಅಮೇರಿಕಾ ಕೇಳುತ್ತಿರುವ ಮಲೇರಿಯಾಗೆ ಕೊಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡುವಂತೆ ಟ್ರಂಪ್ ಮನವಿ ಮಾಡಿದ್ದಾರೆ.
ಭಾರತ ಭಾರೀ ಪ್ರಮಾಣದಲ್ಲಿ ಮಲೇರಿಯಾ ವಿರುದ್ಧ ಹೋರಾಟ ಮಾಡಿದ್ದು ಭಾರತದ ಮೇಲೆ ಅಧಿಕ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಲಿವೆ. ಮತ್ತು ಹೆಚ್ಚಿನ ಪ್ರಮಾಣದ ಮಾತುಗಳು ಭಾರತದಲ್ಲಿ ತಯಾರಾಗುತ್ತವೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ವೈರಸ್ ತಡೆಗಟ್ಟುವಿಕೆಗೂ ಸಹಾಯಕವಾಗಿದ್ದು, ಕೂಡಲೇ ಈ ಮಾತ್ರೆಗಳನ್ನು ಅಮೆರಿಕಕ್ಕೆ ರಫ್ತು ಮಾಡುವಂತೆ ತನ್ನ ಆಪ್ತಮಿತ್ರ ಪ್ರಧಾನಿ ಮೋದಿ ಅವರಲ್ಲಿ ಟ್ರಂಪ್ ದುಂಬಾಲು ಬಿದ್ದಿದ್ದಾರೆ.
ಈ ಕುರಿತು ಖುದ್ದು ಮಾಹಿತಿ ನೀಡಿರುವ ಡೊನಾಲ್ಡ್ ಟ್ರಂಪ್, ಭಾರತದಿಂದ ಆಮದಾಗಲಿರುವ ಈ ಮಾತ್ರೆಗಳನ್ನು ನಾನೂ ಕೂಡ ಸೇವಿಸಲಿದ್ದೇನೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಭಾರತ ಮಲೇರಿಯಾ ರೋಗದ ವಿರುದ್ಧ ಹೋರಾಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಭಾರೀ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದರೂ ರಫ್ತಿನ ಮೇಲೆ ಅದು ನಿಷೇಧ ಹೇರಿದೆ. ಆದರೆ ಅಮೆರಿಕದಲ್ಲಿ ಈಗ ಕೊರೊನಾ ವೈರಸ್ ಭಾರೀ ಅಟ್ಟಹಾಸ ಮೆರೆಯುತ್ತಿದ್ದು, ಇದರ ನಿಯಂತ್ರಣಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಅವಶ್ಯಕತೆ ಇದೆ ಎಂದು ಟ್ರಂಪ್ ಹೇಳಿದ್ದಾರೆ.