ಅಸಂಘಟಿತ ಕೂಲಿ “ಕಾರ್ಮಿಕರ ಭೋಜನದ ವ್ಯವಸ್ಥೆಯನ್ನು ಕೇವಲ ಪ್ರಚಾರಕ್ಕಾಗಿ ಮಾಡುತ್ತಿಲ್ಲ”-ಎಂ.ಬಿ.ಸದಾಶಿವ

ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು ಇದರ ಅಂಗವಾಗಿ ಸುಳ್ಯದಾದ್ಯಂತ ಅಸಂಘಟಿತ ಕೂಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಲು ಸಾಧ್ಯವಾಗದೆ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿಯಲ್ಲಿ ಇದ್ದಾರೆ. ಇವರ ಆಸರೆಗೆ ಧಾವಿಸಿದ ಸುಳ್ಯದ ಕಟ್ಟಡ ಕಾರ್ಮಿಕರ ಸಂಘ ಇಂಜಿನಿಯರ್ ಅಸೋಸಿಯೇಷನ್ ಬಿಲ್ಡರ್ಸ್ ಅಸೋಶಿಯೇಶನ್ ಸಹಭಾಗಿತ್ವದಲ್ಲಿ ದಾನಿಗಳ ಸಹಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಪ್ರಾರಂಭದ ದಿನಗಳಲ್ಲಿ ಸುಮಾರು 350 ರಿಂದ ಪ್ರಾರಂಭಗೊಂಡು ಇದೀಗ 750 ಕ್ಕೂ ಹೆಚ್ಚುಕೂಲಿ ಕಾರ್ಮಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ಕಡೆಗಳಿಂದ ಈ ಕಾರ್ಯಕ್ರಮವನ್ನು ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು ಸಂಘಟಕರಿಗೆ ತುಂಬಾ ನೋವು ಉಂಟಾಗಿದೆ ಎಂದು ಸಂಘಟನೆಯ ಹಿರಿಯರಾದ ಎಂ ಬಿ ಸದಾಶಿರವರು ತಮ್ಮ ಮನದಾಳದ ಮಾತನ್ನು ಪತ್ರಕರ್ತರಲ್ಲಿ ಹಂಚಿಕೊಂಡಿದ್ದಾರೆ.


Ad Widget

ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಕಾರ್ಮಿಕ ಸಂಘಟನೆಯ ಸದಸ್ಯರುಗಳು ಮುಖಂಡರುಗಳು ಹಾಗೂ ಇತರ ಸಂಘಟನೆಯ ಸದಸ್ಯರುಗಳು ಮತ್ತು ಮುಖಂಡರುಗಳು ಈ ಒಂದು ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದೆ, ಬಡವರಿಗಾಗಿ ತಮ್ಮನ್ನು ಮೀಸಲಿಟ್ಟು ಹಸಿದ ಹೊಟ್ಟೆಗೆ ಅನ್ನವನ್ನು ನೀಡುವಲ್ಲಿ ನಾವು ತೊಡಗಿಕೊಂಡಿದ್ದೇವೆ.

ಈ ಒಂದು ಕಾರ್ಯಕ್ಕೆ ಹಲವಾರು ದಾನಿಗಳು ತಮ್ಮ ಸಹಕಾರವನ್ನು ನೀಡಿದ್ದು ಯಾರೇ ಏನೇ ಹೇಳಿದರೂ ಈ ಒಂದು ಒಳ್ಳೆಯ ಕಾರ್ಯದಿಂದ ಹಿಂತಿರುಗುವ ಪ್ರಶ್ನೆಯೇ ಇಲ್ಲ ಬರುವ 14ನೇ ತಾರೀಖಿನವರೆಗೆ ಈ ಒಂದು ಕಾರ್ಯ ನಿರಂತರವಾಗಿ ನಡೆಯಲಿದೆ.

ಈಗಾಗಲೇ ಕಳೆದ ಮೂರುದಿನಗಳಿಂದ ಎಂಬಿ ಫೌಂಡೇಶನ್ ವತಿಯಿಂದ ಭೋಜನದ ವ್ಯವಸ್ಥೆ ಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿಕೊಂಡಿತ್ತು. ಇದೀಗ ಲಿಟಲ್ ಫ್ಲವರ್ ಸಂಸ್ಥೆಯ ಮತ್ತು ಕೂಲಿ ಕಾರ್ಮಿಕರ ಮುಖಂಡರಾದ ನೆಲ್ಸನ್ ರವರು ಒಂದು ದಿನದ ಭೋಜನವನ್ನು ಏರ್ಪಡಿಸುವಲ್ಲಿ ಒಪ್ಪಿಕೊಂಡಿರುತ್ತಾರೆ. ಅದೇ ರೀತಿ ಕೂಲಿ ಕಾರ್ಮಿಕರ ಸಂಘದ ಇನ್ನೊಬ್ಬ ನೇತಾರರಾಗಿ ಇರುವಂತಹ ಕೆ ಪಿ ಜೋನಿ, ಶ್ರೀಪಾದ ಕನ್ಸ್ಟ್ರಕ್ಷನ್ ನಾ ಶ್ಯಾಮ್ ಪ್ರಸಾದ್ , ನಾಗರಾಜ ಮೇಸ್ತ್ರಿ ಜಯನಗರ, ಲಸ್ರಾದೋ ಹಳೆಗೇಟು, ಮಂಜುನಾಥ ಕನ್ಸ್ಟ್ರಕ್ಷನ್ಸ್ ಬಳ್ಳಾರಿ, ತಾಲೂಕು ಮಹಿಳಾ ಸಮಾಜದ ಸಂಘದವರು ಅದೇ ರೀತಿ ಇನ್ನೂ ಹಲವಾರು ಸಂಘ-ಸಂಸ್ಥೆಗಳು ಒಂದೊಂದು ದಿನದ ಭೋಜನ ನೀಡುವ ಕಾರ್ಯದಲ್ಲಿ ಹೆಸರನ್ನು ನೀಡಿದ್ದು ಮುಂದಿನ ದಿನಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

ಸುಳ್ಯದ ಶಿವಕೃಪ ಕಲಾಮಂದಿರದಲ್ಲಿ ಈ ಭೋಜನದ ವ್ಯವಸ್ಥೆಯ ತಯಾರಿಯನ್ನು ನಡೆಸುತ್ತಿದ್ದು, ಏಪ್ರಿಲ್ 4 ರಂದು ಮಾನ್ಯ ಎಸಿ ಅವರು ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ನೋಡಿ ಈ ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರನ್ನು ಪ್ರಶಂಸಿಸಿರುತ್ತಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ನೆಲ್ಸನ್ ಹಳೆಗೇಟು ರವರು ನಾವು ಕೂಡ ಈ ಕೂಲಿ ಕಾರ್ಮಿಕರ ಸೇವೆಯಿಂದಲೇ ಸಮಾಜದಲ್ಲಿ ಇಷ್ಟೊಂದು ಉನ್ನತ ಮಟ್ಟದಲ್ಲಿ ಬೆಳೆದಿರುತ್ತವೆ. ಇದೀಗ ಅವರು ಕಷ್ಟದಲ್ಲಿರುವಾಗ ಅವರನ್ನು ಸಹಕರಿಸುವುದು ನಮ್ಮ ಧರ್ಮ.ನಮ್ಮ ಪ್ರಚಾರಕ್ಕಾಗಿ ಇನ್ನೂ ಹಲವಾರು ಕಾರ್ಯಕ್ರಮಗಳು ಇದೆ ಆದರೆ ಈ ವಿಷಯದಲ್ಲಿ ನಮಗೆ ಪ್ರಚಾರದ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ ಜಯನಗರ ರವರು ಮಾತನಾಡಿ ಕಷ್ಟದಲ್ಲಿರುವ ನಮ್ಮ ಸಹ ಸಿಬ್ಬಂದಿಗಳಿಗೆ ಸಹಕಾರ ನೀಡುವುದು ನಮ್ಮ ಆದ್ಯ ಕರ್ತವ್ಯ. ಕರ್ತವ್ಯವನ್ನು ನಾವು ಪೂರೈಸುತ್ತಾ ಬರುತ್ತಿದ್ದೇವೆ ಮುಂದಿನ ದಿನಗಳಲ್ಲಿ ಕೂಡ ಅವರ ಕಷ್ಟಕ್ಕೆ ಸ್ಪಂದನೆ ನೀಡುವಂತೆ ಕಾರ್ಯಗಳು ನಮ್ಮಿಂದ ನಡೆಯಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಹರಿಣಾಕ್ಷಿ ಸದಾಶಿವ, ಕಾರ್ಮಿಕ ಸಂಘಟನೆಯ ನಾಯಕರಾದ ಬಿಜು, ರಮೇಶ್, ಹನೀಫ್ ಜಯನಗರ ,ಹಾಗೂ ಸಮಿತಿಯ ಹಲವಾರು ನಾಯಕರು ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಳೆಗೇಟು ನಿವಾಸಿ ಮೋನಪ್ಪ ಮೇಸ್ತ್ರಿ ಎಂಬವರು ತಮ್ಮ ವೈವಾಹಿಕ ಜೀವನದ 14ನೇ ವರ್ಷದ ಆಚರಣೆಯನ್ನು ಬಡವರಿಗೆ ಅನ್ನದಾನ ನೀಡುವ ಮೂಲಕ ಆಚರಿಸಿಕೊಂಡರು.

error: Content is protected !!
Scroll to Top
%d bloggers like this: