ಇಂದು 9 ಗಂಟೆಗೆ ಪ್ರಧಾನಿ ಮೋದಿಯವರಿಂದ ವಿಡಿಯೋ ಸಂದೇಶ
ಪ್ರಧಾನಿ ಮೋದಿ ಇಂದು ( ಶುಕ್ರವಾರ ) ಬೆಳಗ್ಗೆ 9 ಗಂಟೆಗೆ ದೇಶದ ಜನತೆಗಾಗಿ ವಿಡಿಯೋ ಸಂದೇಶವೊಂದನ್ನು ನೀಡಿಲಿದ್ದಾರೆ. ಈ ವಿಚಾರವನ್ನು ಅವರು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಇದು ಮೂರನೇ ಬಾರಿಗೆ ಪ್ರಧಾನಿ ಅವರ ವಿಡಿಯೋ ಸಂದೇಶ ವಾಗಿದೆ.
ರಾಷ್ಟ್ರಾದ್ಯಂತ ಕೋವಿಡ್-19 ವೈರಸ್ ಭೀತಿ ಹೆಚ್ಚಾಗುತ್ತಲೇ ಇದ್ದು ಸೋಂಕಿತರ ಸಂಖ್ಯೆ ಮತ್ತು ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ.
ಕೋವಿಡ್19 ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ವಿಡಿಯೋ ಸಂದೇಶವನ್ನು ಇಂದು ಬೆಳಗ್ಗೆ 9 ಗಂಟೆಗೆ ಬಿಡುಗಡೆ ಮಾಡಲಿದ್ದಾರೆ. ಒಂಭತ್ತು ಗಂಟೆಗೆ ನನ್ನ ದೇಶವಾಸಿಗಳಿಗೆ ಸಣ್ಣ ವಿಡಿಯೋ ಸಂದೇಶವನ್ನು ಹಂಚಿಕೊಳ್ಳಲಿದ್ದೇನೆ ಎಂದು ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ದೇಶದಲ್ಲಿ ಮಾರಕ ಸೋಂಕು ಹರಡಲು ಆರಂಭವಾದ ದಿನದಿಂದ ಈವರೆಗೆ ಪ್ರಧಾನಿ ಮೋದಿ ಅವರು ಎರಡು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶವನ್ನು 21 ದಿನಗಳ ಕಾಲ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದ್ದರು.
ಮಾತ್ರವಲ್ಲದೆ ಈ ಕ್ವಾರಂಟೈನ್ ಅವಧಿಯ ಸಮರ್ಪಕ ಬಳಕೆಗೆ ಪ್ರಧಾನಿ ಮೋದಿ ಹಲವು ಸಲಹೆ ಸೂಚನೆಗಳನ್ನು ನೀಡಿದ್ದರು. ಜೊತೆಗೆ ಯೋಗಾಭ್ಯಾಸ ಹಾಗೂ ಯೋಗ ನಿದ್ರೆಗೆ ಸಂಬಂಧಿಸಿ ವಿಡಿಯೋಗಳನ್ನು ಹಂಚಿಕೊಂಡು ಫಿಟ್ನೆಸ್ ಕಾಳಜಿ ವ್ಯಕ್ತಪಡಿಸಿದ್ದರು.