ಆಶಾ ಕಾರ್ಯಕರ್ತೆಗೆ ಬೆದರಿಕೆ| ಇಬ್ಬರ ಬಂಧನ
ಮಂಗಳೂರು : ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ಅಮ್ಟಾಡಿ ಗ್ರಾಮದ ತುಳಸಿ (48) ಎಂಬವರು ಕೊರೋನಾ ವೈರಸ್ ಮುಂಜಾಗೃತಾ ಕರ್ತವ್ಯದ ನಿಮಿತ್ತ ವಿದೇಶದಿಂದ ಆಗಮಿಸಿರುವ ಕಿನ್ನಿಬೆಟ್ಟು ಪರಿಸರದ ನಿತೇಶ ಹಾಗೂ ಕಲಾಯಿ ಪರಿಸರದ ಜಯಂತ ಎಂಬವರುಗಳ ಆರೋಗ್ಯವನ್ನು ಮೊಬೈಲ್ ಮೂಲಕ ಕರೆ ಮಾಡಿ ವಿಚಾರಿಸಿರುತ್ತಾರೆ.
ಏ.1ರಂದು ಸಂಜೆ ಕರ್ತವ್ಯದಲ್ಲಿ ಇರುವ ಸಮಯ ವಿದೇಶದಿಂದ ಆಗಮಿಸಿರುವ ನಿತೇಶ ಎಂಬಾತನ ಸಂಬಂಧಿ ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂಬವರು ಆಶಾ ಕಾರ್ಯಕರ್ತೆಗೆ ಮೊಬೈಲ್ ಮೂಲಕ ಕರೆಮಾಡಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಎ.2 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.