ಸುಳ್ಯ | ಮುರೂರಿನಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ | ಎ.ಎಸ್.ಐ, ಹೆಡ್ ಕಾನ್ಸ್ ಟೇಬಲ್ ಗೆ ಗಾಯ

ಮುರೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದ ಘಟನೆ ನಿನ್ನೆ ಸಂಜೆ ನಡೆದಿದೆ. ಹೇಗಾದರೂ ಮಾಡಿ ಕರ್ನಾಟಕ್ಕೆ ಬರಬೇಕೆಂದು ಕೇರಳ ಗಡಿಯಲ್ಲಿ ಕಾಯುತ್ತಿರುವ ಈ ದುಷ್ಕರ್ಮಿಯು ನಮ್ಮ ಗಡಿ ಕಾಯುತ್ತಿರುವ ಪೋಲೀಸರ ಮೇಲೆಯೇ ಕೈಎತ್ತಿದ್ದಾನೆ.


Ad Widget

Ad Widget

Ad Widget

Ad Widget
Ad Widget

Ad Widget

ಮುರೂರು ಗಡಿಯಲ್ಲಿ ನಿನ್ನೆ ಸಂಜೆ ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಹೆಡ್ ಕಾನ್ಸ್ ಟೇಬಲ್ ರಾಮ ನಾಯ್ಕರು ಎಂದಿನಂತೆ ಕರ್ತವ್ಯದಲ್ಲಿದ್ದರು. ಈ ಸಂದರ್ಭದಲ್ಲಿ ಪರಪ್ಪೆಯ ಸಿನಾನ್ ಎಂಬ ಯುವಕ ಮುರೂರು ಗಡಿ ಭಾಗಕ್ಕೆ ಬಂದು ಅಕ್ರಮವಾಗಿ ಒಳ ನುಸುಳಲು ಪ್ರಯತ್ನಿಸಿದ್ದಾನೆ.


Ad Widget

ಗಡಿ ದಾಟದಂತೆ ಪೊಲೀಸರು ಹೇಳುತ್ತಿದ್ದಂತೆ ಆತ ಪೋಲೀಸರು ಮೇಲೇ ಕಲ್ಲು ಹೊಡೆದ. ಪರಿಣಾಮ ಎ.ಎಸ್.ಐ. ಭಾಸ್ಕರ ಪ್ರಸಾದ್ ಹಾಗೂ ಸಿಬ್ಬಂದಿ ರಾಮ ನಾಯ್ಕರಿಗೆ ಗಾಯವಾಯಿತು. ಪಕ್ಕದಲ್ಲೇ ಇದ್ದ ಹೈವೆ ಪಟ್ರೋಲ್ ವಾಹನಕ್ಕೂ ಕಲ್ಲು ತಾಗಿತು.‌ಘಟನಾ ವಿಷಯ ತಿಳಿದ ಎಸ್.ಐ. ಹರೀಶ್ ತಮ್ಮಸಿಬ್ಬಂದಿಯ ಜತೆ ಸೀದಾ ಮುರೂರಿಗೆ ಹೋದರು. ಅಲ್ಲಿ ಕಲ್ಲು ಹೊಡೆದು ಓಡಿ ಹೋಗಿದ್ದ ಸಿನಾನ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಸಾರ್ವಜನಿಕರ ಸಹಾಯ ಪಡೆದು ಆತನನ್ನು ಠಾಣೆಗೆ ಹೊತ್ತೊಯ್ದಿದ್ದಾರೆ. ಪೋಲೀಸರ ಮೇಲೆ ಕೈ ಮಾಡಿದರೆ ಬಿಡುತ್ತಾರಾ? ಆರೋಪಿ ಸಿನಾನ್ ನ ಚಡ್ಡಿ ಚಂಡಿ ಆಗಿದೆ ಅನ್ನುವ ಮಾಹಿತಿ ಇದೆ.

error: Content is protected !!
Scroll to Top
%d bloggers like this: