ಬದುಕು ನಿರಂತರ ಹರಿಯುವ ನೀರಿನಂತೆ….ಹೆಬ್ಬಂಡೆ ತಡೆದರೂ ನುಗ್ಗಿ ನಡೆ ಮುಂದೆ | ಬನ್ನಿ ಬದುಕು ಕಟ್ಟೋಣ
ಬನ್ನಿ ಬದುಕು ಕಟ್ಟೋಣ……….ಬದುಕು ನಿರಂತರ ಹರಿಯುವ ನೀರಿನಂತೆ. ಅದೆಷ್ಟೋ ಬಂಡೆಗಳೂ ತಡೆದರೂ ನುಸುಳಿ ಮುಂದೆ ಸಾಗಬೇಕು. ಹಾಗೆಯೇ ಮಾನವ ಬದುಕು. ನಾವು ನಮ್ಮ ಬದುಕಿನಲ್ಲಿ ನೂರಾರು ಆಸೆಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತೇವೆ. ಆಸೆ ಗಳನ್ನು ಈಡೇರಿಸುವಾಗ ಎಷ್ಟೊ ತರಹದ ಸಮಸ್ಯೆಗಳು ಎದುರಾಗುತ್ತವೆ , ಆದರೂ ಮುಂದೆ ಸಾಗಿ ಭರವಸೆಯ ಬದುಕು ಕಟ್ಟಲು ಮತ್ತೆ ತಯಾರಾಗುತ್ತೇವೆ. ನಾವು ನಮ್ಮ ಬದುಕನ್ನು ಸಾಗಿಸಲು ಅದೆಷ್ಟೋ ದೂರದ ಊರಿಗೆ ಹೋಗಿ ಏಕಾಂಗಿಯಾಗಿ ದುಡಿಯುತ್ತೇವೆ, ಮನೆಯ ವಾತವರಣ ಬಿಟ್ಟು ಅತಿಥಿ ಮನೆಯಲ್ಲಿ ಉಳಿಯುವುದು ಅನಿವಾರ್ಯತೆ.. ಸಂಬಂಧ ಹಾಗೂ ಸಂಬಂಧಿಗಳ ಆತ್ಮೀಯತೆಯನ್ನು ಕಳೆದುಕೊಳ್ಳುವ ಸನ್ನಿವೇಶ. ನಮ್ಮ ಸಂಸ್ಕೃತಿ ಬಿಟ್ಟು ಪರಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಪರಿಸ್ಥಿತಿ.
ಇವೆಲ್ಲವೂ ಈಗೀನ ಮಾನವ ಬದುಕಿನ ನೈಜ ಚಿತ್ರಣ. ಇಂತಹ ಬದುಕು ಸಮಂಜಸವಲ್ಲ ಎಂದು ಅನಿಸಿದಾಗ ದೇವರು ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸುತ್ತಾನೆ. ಅದೇ ನಮ್ಮ ಮುಂದೆ ಕಾಣುವ ಕೆಲವೊಂದು ಭೀಕರ ಘಟನೆ ಗಳು. ಇದೀಗ ಇಡೀ ವಿಶ್ವದಲ್ಲೇ ವ್ಯಾಪಿಸಿರುವ ಕೋರೋನ ಭೀತಿ. ಕಣ್ಣಿಗೆ ಕಾಣದ ಜೀವಿಯಾದ ಇದು, ಮಾನವ ಜೀವಿಯ ಮೇಲೆ ರಭಸದಿಂದ ಆವರಿಸಿ, ಕಾಣದ ಲೋಕಕ್ಕೆ ಕಳುಹಿಸುವ ಕಾಯಕವನ್ನು ಮಾಡುತ್ತಿದೆ. ವಿದೇಶದಲ್ಲಿ ಅದೆಷ್ಟೋ ಜನರು ತರಗೆಲೆಯಂತೆ ಉದುರಿ ಜೀವ ಕಳೆದುಕೊಂಡ ಪರಿಸ್ಥಿತಿ. ನೀರಿನಿಂದ ತೆಗೆದ ಮೀನಿನಂತೆ ಆಸ್ಪತ್ರೆಗಳಲ್ಲಿ ಒದ್ದಾಟ. ಜೀವ ಉಳಿಸಲು ಹಾಗೂ ಉಳಿಯಲು ರೋಗಿ ಮತ್ತು ವೈದ್ಯರ ಹೋರಾಟ. ಪ್ರಾಣಕಳೆದುಕೊಂಡ ವ್ಯಕ್ತಿಯ ಜೀವವನ್ನು ಕಾಣದಂತೆ ಸಾಗಾಟ. ಈ ಜೀವವನ್ನು ನೋಡಲು ಮನೆಯವರ ಪರದಾಟ.
ಇವೆಲ್ಲವನ್ನೂ ನೋಡಿ,ಕೇಳಿ ನಮ್ಮ ದೇಶದಲ್ಲಿ ಇಂತಹ ಸ್ಥಿತಿಗೆ ಕಡಿವಾಣ ಹಾಕಬೇಕು ಎಂದು ಮನೇಯೇ ಮದ್ದು ಔಷಧಿ ಪ್ರಾರಂಭಿಸಿದರು. ಈ ಔಷಧಿಯಲ್ಲಿ ಜೀವ ಇದ್ದರೆ ಜೀವನ. ಆರೋಗ್ಯ ಇದ್ದರೆ ಆಯಸ್ಸು. ಎಂದು ಮಾನವ ಬದುಕಿನ ಮೌಲ್ಯಗಳನ್ನು ಆವರಿಸಿದೆ. ಇದನ್ನು ಪಾಲಿಸಲು ಸಿದ್ಧವಾಗಿರಬೇಕು ಜನತೆ. ಜನರ ಜೀವ ಕಾಪಾಡಲು ಈ ಸುಭದ್ರತೆ…ಇದನ್ನು ಅನುಸರಿಸಿ ನಾವು ಮನೆಯಲ್ಲೇ ಇದ್ದು ನಮ್ಮನ್ನು ಹಾಗೂ ಇತರರನ್ನು ಕಾಪಾಡಿಕೊಂಡು ನಮ್ಮ ಸರ್ಕಾರಕ್ಕೆ ಬದ್ಧರಾಗೋಣ. ಈ ಭೀತಿಯಿಂದ ಜೀವ ಉಳಿಸಿ, ಮತ್ತೆ ಬದುಕು ಕಟ್ಟೋಣ.
ಇಂತೀ ನಿಮ್ಮ ಗೆಳತಿ: ಹಸ್ತವಿ ಮಡಪ್ಪಾಡಿ (ಮೂರ್ಜೆ)