ರೈತ ನಮ್ಮ ದೇಶದ ಬೆನ್ನೆಲುಬು | ಜೈ ಕಿಸಾನ್

ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಫಲವನು ಬಯಸದ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು ‘ ಎನ್ನುವಂತೆ ರೈತನೆಂದರೇ ಒಬ್ಬ ಸಾಮಾನ್ಯ ಮನುಷ್ಯ, ಕೂಲಿ ಕೆಲಸಗಾರ ಎಂಬ ಹಲವಾರು ಚಿಂತನೆಗಳು ಇಂದಿನ ಜನರ ಮನಸಲ್ಲಿದೆ. ಆದರೆ ಆಳವಾಗಿ ವಿಚಾರ ಮಾಡಿ ನೋಡಿದಾಗ ರೈತ ನಮ್ಮ ದೇಶದ ಬೆನ್ನೆಲುಬು ಎಂಬುದು ನಮಗೆ ಅರಿವಾಗುತ್ತದೆ. ನಾವು ಸೇವಿಸುವ ಪ್ರತಿಯೊಂದು ಅನ್ನದ ಅಗುಳಿನಲ್ಲೂ ರೈತನ ಪರಿಶ್ರಮ, ಬೆವರ ಹನಿ ಅಡಗಿದೆ ಎಂಬುದು ನಾವು ಅರಿತುಕೊಳ್ಳಬೇಕು. ಆದರೆ ನಾವು ಅವರ ಬೆವರ ಹನಿಗೆ ಗೌರವ ಕೊಡದೆ ಅಗತ್ಯಕ್ಕಿಂತ ಹೆಚ್ಚಾಗಿ ಅನ್ನ ತೆಗೆದುಕೊಂಡು ಅನಗತ್ಯವಾಗಿ ಅನ್ನವನ್ನು ಬಿಸಾಡುತ್ತೇವೆ. ಇದು ನಾವು ಮಾಡುವ ಅತ್ಯಂತ ದೊಡ್ಡ ತಪ್ಪು ನಾವು ಬಿಸಾಡುವ ಪ್ರತಿಯೊಂದು ಅನ್ನದ ಅಗುಳಿನಲ್ಲೂ ಆತನ ಕಷ್ಟ ಪರಿಶ್ರಮ ಇದೆ ಎಂಬುದನ್ನು ಮರೆಯುತ್ತೇವೆ.

ನಾವುಗಳೆಲ್ಲ ಯಾವುದೋ ಒಂದು ಸಮಾರಂಭದಲ್ಲಿ ಉಳಿದ ಆಹಾರವನ್ನು ಅನಗತ್ಯವಾಗಿ ಬಿಸಾಡುತ್ತೇವೆ. ಅದರ ಬದಲು ಅದೇ ಆಹಾರವನ್ನು ಯಾರಾದರೂ ಹಸಿದವರಿಗೆ ನೀಡಿದರೆ ಅವರ ಒಂದು ಗಳಿಗೆ ಖುಷಿ ಮತ್ತು ಅವರು ಹಾರೈಸುವ ಆಶೀರ್ವಾದ ಎಲ್ಲೋ ಮುಂದೊಂದು ದಿನ ನಮ್ಮನ್ನು ಕಾಪಾಡಬಹುದು, ಮತ್ತು ಅವರ ಒಂದು ಹೊತ್ತಿನ ಹಸಿವು ನೀಗಿಸಿದ ಪುಣ್ಯವು ದೊರೆಯಬಹುದು.

ರೈತ ಬೆಳೆಯುವ ಹೆಚ್ಚಿನ ಕೃಷಿಗಳು ಮುಂಗಾರನ್ನು ಆಧಾರಿತವಾಗಿರುತ್ತದೆ. ಆದರೆ ಒಂದು ವೇಳೆ ಮಳೆ ಹೆಚ್ಚಾಗಿ ಬಂದು, ನೈಸರ್ಗಿಕ ವಿಕೋಪಗಳಿಂದ, ಕೀಟಗಳ ಹಾವಳಿಯಿಂದ ಬೆಳೆಗೆ ಹಾನಿ ಉಂಟಾದಾಗ ರೈತ ಸಂಕಷ್ಟಕ್ಕೀಡಾಗುವ ತಾನೆ.ಆತ ಸಂಕಷ್ಟಕ್ಕೀಡಾದಾಗ ಆತನ ಮೇಲೆ ಸಾಲದ ಹೊರೆ, ಮನೆಯ ಜವಾಬ್ದಾರಿ ಹೀಗೆ ಇನ್ನು ಹಲವು ಸಮಸ್ಯೆಗಳಿಂದ ಬಳಸುತ್ತಾನೆ. ಈ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗದೆ ಆತ ಕೊನೆಗೆ ಆತ್ಮಹತ್ಯೆಗೆ ಮುಂದಾಗುತ್ತಾನೆ. ಇದು ನಿಜಕ್ಕೂ ಬೇಸರದ ಸಂಗತಿ .

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ದೇಶದ ಬೆನ್ನೆಲುಬಾದ ರೈತನನ್ನು ಇಂತಹ ಸಮಸ್ಯೆಯಿಂದ ಪಾರು ಮಾಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ರೈತರ ಆತ್ಮಹತ್ಯೆಯನ್ನು ತಪ್ಪಿಸಲು ಸರ್ಕಾರ ಅದೆಷ್ಟು ಯೋಜನೆಗಳನ್ನು, ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಮತ್ತು ತರಲು ಪ್ರಯತ್ನಿಸುತ್ತಿದೆ.

ಉದಾಹರಣೆಗೆ ಸಾಲ ಮನ್ನಾ, ಕೃಷಿಗೆ ಸಂಬಂಧಪಟ್ಟ ಉಪಕರಣಗಳನ್ನು ಅರ್ಧದರಕ್ಕೆ ಒದಗಿಸುವುದು, ಕೀಟನಾಶಕಗಳನ್ನು ನೀಡುವ ವ್ಯವಸ್ಥೆ ಮಾಡುತ್ತಿದೆ. ಆದರೆ ಈ ವ್ಯವಸ್ಥೆಗಳು ರೈತನನ್ನು ಸಂಪೂರ್ಣವಾಗಿ ಸಾಲದ ಹೊರೆಯಿಂದ ತಪ್ಪಿಸಲು ಸಾಧ್ಯವಾಗುತ್ತಿಲ್ಲ.ರೈತರು ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಗೆ ಕೆಲವೊಮ್ಮೆ ಸರಿಯಾದ ಮಾರುಕಟ್ಟೆ ಬೆಲೆ ದೊರೆಯದಿದ್ದಾಗ ಆತನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಂತಾಗುತ್ತದೆ.

ಇಷ್ಟೆಲ್ಲಾ ಕಷ್ಟಪಡುವ ರೈತ ಒಮ್ಮೆ ನಾನು ಕೃಷಿ ಮಾಡುವುದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದು ಮುಂದಾದರೆ ನಾವೆಲ್ಲಾ ಒಂದು ಹೊತ್ತಿನ ಅನ್ನಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಸೂರ್ಯನಷ್ಟೇ ಸತ್ಯ. ಆತ ಎಷ್ಟೇ ಸಂಕಷ್ಟಕ್ಕೆ ಈಡಾದರೂ ಎಷ್ಟೇ ಕಷ್ಟ ಅನುಭವಿಸಿದರೂ ಕೃಷಿಯನ್ನು ಬಿಟ್ಟು ಬೇರೆ ಯಾವುದೇ ವೃತ್ತಿಯನ್ನು ಅವಲಂಬಿಸುವುದಿಲ್ಲ. ಹಾಗಾಗಿ ರೈತ ನಿಜಕ್ಕೂ ಗ್ರೇಟ್.

✒ಸಂದೀಪ್.ಎಸ್.ಮಂಚಿಕಟ್ಟೆ ,ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.

Leave A Reply

Your email address will not be published.