ಸಿಇಟಿ ಸಾಮಾನ್ಯ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆ
ಏಪ್ರಿಲ್ 12 ರ ನಂತರ ರಾಜ್ಯದ ಎಲ್ಲಾ ಶಾಲೆಗಳಿಗೆ ವಾರ್ಷಿಕ ರಜೆ ಘೋಷಿಸಲಾಗಿದೆ. ಕೋರೋನಾ ಕಾರಣದಿಂದ ಈಗಾಗಲೇ ಮಕ್ಕಳಿಗೆ, ಶಿಕ್ಷಕರಿಗೂ ರಜೆ ನೀಡಲಾಗಿದೆ ಎಂದು ಅಧಿಕೃತವಾಗಿ ಸರಕಾರ ಈ ಘೋಷಣೆ ಮಾಡಿದೆ.
ಎಪ್ರಿಲ್ 22 ರಿಂದ 24 ಕ್ಕೆ ನಡೆಯಲಿರುವ CET ಸಾಮಾನ್ಯ ಪ್ರವೇಶ ಪರೀಕ್ಷೆ ಗಳನ್ನು ಸರಕಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.
ಈಗಾಗಲೇ ಕೆಲವು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪಿಯುಸಿ ಪರೀಕ್ಷೆಗಳು ಕೂಡ ನಡೆದಿಲ್ಲವಾದ್ದರಿಂದ ಅನಿವಾರ್ಯವಾಗಿ ಅವರು ಸಾಮಾನ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಪಿ ಯು ಸಿ ಯ ಇಂಗ್ಲಿಷ್ ಪರೀಕ್ಷೆ ಯೊಂದು ಬಾಕಿ ಉಳಿದಿದೆ. ಮುಂದಿನ ಸಿಇಟಿ ಪರೀಕ್ಷೆ ದಿನಾಂಕವನ್ನು ಏಪ್ರಿಲ್ ಮೂರನೇ ವಾರದಲ್ಲಿ ಪ್ರಕಟಿಸಲಾಗುತ್ತದೆ.
ಕೊರೋನಾ ಸಂಕಟ ಮುಗಿದು ನೆಮ್ಮದಿ ಮೂಡುವ ದಿನ ಗೊತ್ತಾ ? ಇಲ್ಲಿದೆ ನೋಡಿ !