ಕೊರೊನ ಕಳವಳ | ರಾಮಕುಂಜದ ಆನ ದಿಗ್ಬಂಧನ
ಕಡಬ: ಕೊರೊನ ಸೋಂಕು ನಿಯಂತ್ರಣಕ್ಕಾಗಿ ಊರಿಗೆ ಬರುವ ಏಕೈಕ ರಸ್ತೆಯನ್ನು ತಡೆ ಹಿಡಿದು ರಾಮಕುಂಜ ಗ್ರಾಮದ ಆನದವರು ತಮ್ಮನ್ನು ತಾವು ರಕ್ಷಣೆಗೆ ಮುಂದಾಗಿದ್ದರೆ… ರಾಮಕುಂಜ – ಬಜತ್ತೂರು ಈ ಎರಡು ಗ್ರಾಮಗಳ ಪ್ರಮುಖ ಸಂಪರ್ಕ ರಸ್ತೆಯು ಆನದ ಮೂಲಕ ಹಾದು ಹೋಗುತ್ತದೆ.
ಭಾರತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಯಲ್ಲಿ ಪೊಲೀಸರು ಇರುವ ಕಾರಣ ಹೊರಗಿನ ಅನೇಕರು ತಮ್ಮ ವಾಹನಗಳಲ್ಲಿ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರು.
ಹೀಗೆ ಈ ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.. ಇದನ್ನರಿತ ಊರಿನವರು ಸೋಂಕು ಹರಡದಿರಲು ಊರಿನ ಹೊರಗಿನಿಂದ ಒಳಗೆ, ಒಳಗಿನಿಂದ ಹೊರಗೆ ಯಾರು ಹೋಗದಂತೆ ನಿರ್ಬಂಧ ಹೇರಿದ್ದಾರೆ.
ಈ ನಿರ್ಬಂಧವನ್ನು ರಸ್ತೆಯಲ್ಲಿ ಸಂಚರಿಸುವ ಹೊರಗಿನವರು ಅನ್ಯತಃ ಭಾವಿಸದೆ, ಸರ್ಕಾರ ಕೈಗೊಂಡ ಕಾರ್ಯಕ್ರಮಗಳಿಗೆ ಅನುಸಾರ ಕೊರೊನ ತೊಲಗಿಸಲು ಸ್ವಯಂ ಜಾಗೃತಿ ಪಡೆದು ಎಲ್ಲರೂ ಮನೆಯಲ್ಲಿಯೇ ಇದ್ದು ನಾವು ದೇಶಕ್ಕಾಗಿ ಸಲ್ಲಿಸುವ ಅಳಿಲು ಸೇವೆ ಎಂದು ತಿಳಿಯ ಬೇಕು ಎಂಬುದು ಇಲ್ಲಿಯವರ ಆಶಯವಾಗಿದೆ.