ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ಭಾರತದ ಆನ್ ಲೈನ್ ಡೆಲಿವರಿ ಸೇವೆಗಳು ಬಂದ್
ಭಾರತದ ಶಾಪಿಂಗ್ ಸೈಟ್ಗಳು ಕೂಡ ತಮ್ಮ ಡೆಲಿವರಿ ಸೇವೆಯನ್ನ ಒಂದೊಂದಾಗಿ ಬಂದ್ ಮಾಡುತ್ತಿವೆ.
ಭಾರತದ ಅತೀ ದೊಡ್ಡ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಈಗಾಗಲೇ ಹೊಸ ಆರ್ಡರ್ ಸ್ವೀಕರಿಸೋದನ್ನ ನಿಲ್ಲಿಸಿವೆ. ಈಗಾಗಲೇ ಬಂದ ಆರ್ಡರ್ ಗಳನ್ನ ಸಪ್ಲೈ ಮಾಡಿ ಕೈತೊಳೆದುಕೊಂಡರೆ ಮುಗಿಯಿತು ಎಂದು ಫ್ಲಿಪ್ಕಾರ್ಟ್ ಹೇಳಿಕೊಂಡಿದೆ.
ಆದರೆ ಅಮೇಜಾನ್ ಮಾತ್ರ, ನಾವು ಯಾವುದೇ ಹೊಸ ಆರ್ಡರ್ಗಳನ್ನ ಸ್ವೀಕರಿಸೋದಿಲ್ಲ. ಬಂದಿರುವ ಆರ್ಡರ್ ಗಳಲ್ಲಿ ದಿನಸಿ ಪದಾರ್ಥಗಳು, ಹೆಲ್ತ್ಕೇರ್ ಸಂಬಂಧಿತ ಉತ್ಪನ್ನಗಳು ಹಾಗೂ ದಿನನಿತ್ಯದ ಬಳಕೆಗೆ ಬೇಕಾಗುವ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಹೆಚ್ಚಿನ ಗಮನಹರಿಸುತ್ತೇವೆ ಎಂದು ಹೇಳಿದೆ.
ಕಡಿಮೆ ಪ್ರಾಮುಖ್ಯತೆಯ ವಸ್ತುಗಳಿಗಾಗಿ ಈಗಾಗಲೇ ಆರ್ಡರ್ ಮಾಡಿರೋರಿಗೆ ತಮ್ಮ ಆರ್ಡರ್ ಕ್ಯಾನ್ಸಲ್ ಮಾಡುವಂತೆ ಹಾಗೂ ಮೊದಲೇ ಹಣ ಪಾವತಿಸಿದ್ದರೆ, ಅದ ಹಣವನ್ನು ರೀಫಂಡ್ ಮಾಡುತ್ತೇವೆಂದು ನಮ್ಮ ಗ್ರಾಹಕರಿಗೆ ಹೇಳಿದ್ದೇವೆ ಎಂದು ಅಮೇಜಾನ್ ತಿಳಿಸಿದೆ.
ಉಳಿದಂತೆ ಗ್ರೋಫರ್ಸ್, ಬಿಗ್ ಬಾಸ್ಕೆಟ್, ಲೆನ್ಸ್ ಕಾರ್ಟ್ ಮತ್ತೆ ಕೆಲವು ಆನ್ಲೈನ್ ಶಾಪಿಂಗ್ ಸೈಟ್ಗಳು ಕೂಡ ಬಿಜಿನೆಸ್ ನಿಲ್ಲಿಸಿವೆ.