ಅಮೆಜಾನ್, ಫ್ಲಿಪ್​ಕಾರ್ಟ್ ಮುಂತಾದ ಭಾರತದ ಆನ್ ಲೈನ್ ಡೆಲಿವರಿ ಸೇವೆಗಳು ಬಂದ್

ಭಾರತದ ಶಾಪಿಂಗ್​ ಸೈಟ್​ಗಳು ಕೂಡ ತಮ್ಮ ಡೆಲಿವರಿ ಸೇವೆಯನ್ನ ಒಂದೊಂದಾಗಿ ಬಂದ್ ಮಾಡುತ್ತಿವೆ.

ಭಾರತದ ಅತೀ ದೊಡ್ಡ ಇ-ಕಾಮರ್ಸ್​​ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್​ ಈಗಾಗಲೇ ಹೊಸ ಆರ್ಡರ್​​ ಸ್ವೀಕರಿಸೋದನ್ನ ನಿಲ್ಲಿಸಿವೆ. ಈಗಾಗಲೇ ಬಂದ ಆರ್ಡರ್ ಗಳನ್ನ ಸಪ್ಲೈ ಮಾಡಿ ಕೈತೊಳೆದುಕೊಂಡರೆ ಮುಗಿಯಿತು ಎಂದು ಫ್ಲಿಪ್​ಕಾರ್ಟ್ ಹೇಳಿಕೊಂಡಿದೆ.

ಆದರೆ ಅಮೇಜಾನ್ ಮಾತ್ರ, ನಾವು ಯಾವುದೇ ಹೊಸ ಆರ್ಡರ್​​ಗಳನ್ನ ಸ್ವೀಕರಿಸೋದಿಲ್ಲ. ಬಂದಿರುವ ಆರ್ಡರ್ ಗಳಲ್ಲಿ ದಿನಸಿ ಪದಾರ್ಥಗಳು, ಹೆಲ್ತ್​​​ಕೇರ್​ ಸಂಬಂಧಿತ ಉತ್ಪನ್ನಗಳು ಹಾಗೂ ದಿನನಿತ್ಯದ ಬಳಕೆಗೆ ಬೇಕಾಗುವ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಹೆಚ್ಚಿನ ಗಮನಹರಿಸುತ್ತೇವೆ ಎಂದು ಹೇಳಿದೆ.

ಕಡಿಮೆ ಪ್ರಾಮುಖ್ಯತೆಯ ವಸ್ತುಗಳಿಗಾಗಿ ಈಗಾಗಲೇ ಆರ್ಡರ್​​ ಮಾಡಿರೋರಿಗೆ ತಮ್ಮ ಆರ್ಡರ್​ ಕ್ಯಾನ್ಸಲ್ ಮಾಡುವಂತೆ ಹಾಗೂ ಮೊದಲೇ ಹಣ ಪಾವತಿಸಿದ್ದರೆ, ಅದ ಹಣವನ್ನು​ ರೀಫಂಡ್ ಮಾಡುತ್ತೇವೆಂದು ನಮ್ಮ ಗ್ರಾಹಕರಿಗೆ ಹೇಳಿದ್ದೇವೆ ಎಂದು ಅಮೇಜಾನ್​​ ತಿಳಿಸಿದೆ.

ಉಳಿದಂತೆ ಗ್ರೋಫರ್ಸ್​​, ಬಿಗ್ ಬಾಸ್ಕೆಟ್, ಲೆನ್ಸ್ ಕಾರ್ಟ್ ಮತ್ತೆ ಕೆಲವು ಆನ್​ಲೈನ್​ ಶಾಪಿಂಗ್​ ಸೈಟ್​​ಗಳು ಕೂಡ ಬಿಜಿನೆಸ್ ನಿಲ್ಲಿಸಿವೆ.

Leave A Reply

Your email address will not be published.