ಹಲವು ಪತ್ರಿಕೆ ಒಂದೇ ಸಂಪಾದಕೀಯ,ಒಗ್ಗಟ್ಟು ಪ್ರದರ್ಶಿಸಿದ ಮುದ್ರಣ ಮಾಧ್ಯಮ|ಸುದ್ದಿ ಪರಾಮರ್ಶಿತ, ಪತ್ರಿಕೆಗಳು ಸುರಕ್ಷಿತ

20 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಸಮೂಹ ಮಾಧ್ಯಮಗಳಲ್ಲಿ ಪತ್ರಿಕೋದ್ಯಮಕ್ಕೆ ಪ್ರಥಮ ಪ್ರಾಶಸ್ತ್ಯ. ಪತ್ರಿಕೋದ್ಯಮ ಮಾನವನ ಭಾವನೆ, ಆಕಾಂಕ್ಷೆ & ಪರಂಪರೆಗಳನ್ನು ಇತರರೊಡನೆ ಪರಸ್ಪರ ಹಂಚಿಕೊಳ್ಳುವುದಕ್ಕೆ ಪ್ರೇರಕವಾಗಿದೆ.

ಶ್ರೀ ಸಾಮಾನ್ಯನ ಕ್ರಿಯಾಶೀಲತೆಯನ್ನು ಬೆಳೆಯಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಆದುದರಿಂದಲೇ ಪತ್ರಿಕಾ ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವ ಒಂದು ರಾಜಕೀಯ ಪ್ರಕ್ರಿಯೆ. ಕಾರ್ಯಾಂಗ ಶಾಸಕಾಂಗ & ನ್ಯಾಯಾಂಗಗಳು ಪರಸ್ಪರ ಒಂದನ್ನೊಂದು ಅವಲಂಬಿಸಿದ್ದು, ಪ್ರತಿಯೊಂದರ ಕಾರ್ಯಕ್ಷಮತೆ ಉಳಿದೆರಡರ ಮೇಲೆ ಅವಲಂಬಿತವಾಗಿರುವುದರಿಂದ ಇವುಗಳನ್ನು ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳೆಂದೇ ಪರಿಗಣಿಸಲಾಗಿದೆ. ಅದೂ ಸಾಲದೆಂಬಂತೆ ಆಧುನಿಕ ಯುಗದಲ್ಲಿ ಪತ್ರಿಕಾರಂಗವನ್ನು ನಾಲ್ಕನೇ ಆಧಾರ ಸ್ಥಂಬವೆಂದು ಪ್ರತಿಬಿಂಬಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಸಾಮಾನ್ಯರಿಗೂ ಅತೀ ಅಗತ್ಯ ಹಾಗೂ ಅನಿವಾರ್ಯವೆನಿಸಿದ ಪತ್ರಿಕೆಗಳ ಜನರಿಗೆ ಸ್ಪಷ್ಟ ಹಾಗೂ ಆಧಾರ ಸಹಿತ ವರದಿಗಳನ್ನು ನೀಡುತ್ತಿದೆ. ವಿಶ್ವವನ್ನೇ ಬೆಚ್ಚಿ ಬೀಳಿಸಿದ ಮಹಾಮಾರಿ ಕೊರೊನಾ ಕೋವಿಡ್ 19 ಮಹಾಮಾರಿಯ ವಿರುದ್ದ ದೇಶವನ್ನು ಒಂದು ಮಾಡುವಲ್ಲಿ ಪತ್ರಿಕೆಗಳೂ ಒಂದು ಮಾಧ್ಯಮವಾಗಿದೆ.

ಹೀಗೆ ಜನರ ಜತೆ ಹಾಸುಹೊಕ್ಕಾಗಿರುವ ದಿನ ಪತ್ರಿಕೆಗಳು ದೇಶವೇ ಕೊರೊನಾ ಭೀತಿಯ ಸಂದಿಗ್ಧತೆಯ ಸಂದರ್ಭದಲ್ಲಿ ತಮ್ಮ ಏಕ ಸಂಪಾದಕೀಯದ ಮೂಲಕ ಒಗ್ಗಟ್ಟು ಪ್ರದರ್ಶಿಸಿದೆ. ಪತ್ರಿಕೆಗಳಿಂದದ ವೈರಸ್ ಹರಡುತ್ತದೆ ಎಂಬ ಆಧಾರ ರಹಿತ ವಿಷಯಕ್ಕೆ ಇಂದಿನ ಸಂಪಾದಕೀಯ ಮೂಲಕ ಆಧಾರ ಸಹಿತ ಮಾಹಿತಿ ನೀಡಿದ್ದಾರೆ.

ಒಂದೊಂದು ಪತ್ರಿಕೆಯ ಸಂಪಾದಕೀಯ ಬೇರೆ ಬೇರೆ ಸಂದರ್ಭದಲ್ಲಿ ಭಿನ್ನವಾಗಿರುತ್ತದೆ. ಕೊರೊನಾ ಜಾಗೃತಿಯ ಕುರಿತ ಭಾರತದ ಮಾಧ್ಯಮ ವರದಿಗೆ ಪ್ರಧಾನಿಯವರೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಹಲವು ಪತ್ರಿಕೆ ಒಂದೇ ಸಂಪಾದಕೀಯದ ಮೂಲಕ ಮುದ್ರಣ ಮಾಧ್ಯಮ ತಮ್ಮ ಒಗ್ಗಟ್ಟು ಪ್ರದರ್ಶಿಸಿದೆ. ಉದಯವಾಣಿ, ವಿಜಯವಾಣಿ, ಹೊಸದಿಗಂತ, ಪ್ರಜಾವಾಣಿ, ಕನ್ನಡ ಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ವಿಶ್ವವಾಣಿ ಪತ್ರಿಕೆಗಳ ಸಂಪಾದಕೀಯ ಮುದ್ರಣ ಮಾಧ್ಯಮದ ಏಕತೆಗೆ ಕೈಗನ್ನಡಿಯಾಗಿದೆ. ಜೈ ಹೋ…

error: Content is protected !!
Scroll to Top
%d bloggers like this: