ಅನಗತ್ಯ ತಿರುಗಾಟ | ಬಿಸಿ ಮುಟ್ಟಿಸಿದ ಬೆಳ್ಳಾರೆ ಪೊಲೀಸರು

ಸುಳ್ಯ: ತಾಲೂಕಿನ ಬೆಳ್ಳಾರೆಯಲ್ಲಿ ಅನಗತ್ಯವಾಗಿ ತಿರುಗಾಟ ಮಾಡಿದವರನ್ನು ಮತ್ತು ಗುಂಪು ಸೇರಿದ ಕೆಲವರಿಗೆ ಪೊಲೀಸರು ಬಿಸಿ ಮುಟ್ಟಿಸಿ ಚದುರಿಸಿದ ಘಟನೆ ನಡೆದಿದೆ.


Ad Widget

Ad Widget

ಬೆಳ್ಳಾರೆಯಲ್ಲಿ ಕೆಲವು ಅಂಗಡಿಗಳನ್ನು ಮಾಲಕರು ಬೆಳಿಗ್ಗೆ ತೆರೆದಿದ್ದು ಪೊಲೀಸರು ಬಂದ್ ಮಾಡಿಸಿದ ಘಟನೆ ನಡೆದಿದೆ. ಇದು ಪ್ರಸ್ತುತ ಸ್ಥಿತಿಯಲ್ಲಿ ಅನಿವಾರ್ಯ. ಆದರೂ ಕೆಲವರು ಪೊಲೀಸರ ಮೇಲೆ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ.ಪೊಲೀಸರಿಗೂ ಕುಟುಂಬ ಇದೆ ಆದರೂ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಜನತೆ ಅರ್ಥೈಸಿಕೊಳ್ಳಬೇಕಿದೆ.


Ad Widget

ಅಲ್ಲದೆ ಠಾಣಾ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣ ಕ್ಕೆ ಸರಕಾರ, ಜಿಲ್ಲಾಡಳಿತ ಇಂತಹ ಕ್ರಮ ಜರುಗುಸಿದರೂ ಜನತೆಗೆ ಅರ್ಥವಾಗದೆ ಇರುವುದಕ್ಕೆ ಏನನ್ನಬೇಕು ಎಂಬುದೇ ಪ್ರಶ್ನೆ?

Ad Widget

Ad Widget

Ad Widget

ಪರಿಸ್ಥಿತಿ ಕೈ ಮೀರುತ್ತಿದ್ದರೂ ಜಾಲಿರೈಡ್ ಮಾಡುತ್ತಿರುವವರು ಇಂತಹ ಕಠಿಣ ಪರಿಸ್ಥಿತಿಯನ್ನು ತಮಾಷೆಯಾಗಿ ಪರಿಗಣಿಸಿದ್ದಾರೆ ಎಂದರೆ ಏನನ್ನಬೇಕು ಇವರ ಮನಸ್ಥಿತಿಗೆ.

error: Content is protected !!
Scroll to Top
%d bloggers like this: