ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ

Share the Article

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ

ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಇಂದು ಕೊರೋನ ಮಹಾಮರಿಯನ್ನೂ ತಡೆಗಟ್ಟುವ ಉದ್ದೇಶದಿಂದ ಇಂದು ಮಧ್ಯರಾತ್ರಿಯಿಂದ ಇಡಿ ದೇಶವೇ ಲಾಕ್ ಡೌನ್ ಎಂದು ಘೋಷಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಮನೆಯಿಂದ ಹೊರ ಬಾರದೆ ರೋಗ ಹರಡುವಿಕೆಯನ್ನೂ ತಡೆಯಬೇಕಾಗಿದೆ , ಈ ರೋಗ 67ದಿನದಲ್ಲಿ 1ಲಕ್ಷ ಜನರಿಗೆಹರಡಿತು 11 ದಿನದಲ್ಲಿ 2 ಲಕ್ಷ ಜನರಿಗೆ ಹರಡಿದೆ.ಯೋಚಿಸಿ 2ಲಕ್ಷ ದಿಂದ 3ಲಕ್ಷ ಜನರಿಗೆ ಹರಡಲು ಕೇವಲ 4 ದಿನ ಸಾಕು. ಇದನ್ನೂ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ..ಇದು ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ..ಇದಕ್ಕೆ ಪರಿಹಾರವೆಂದರೆ ಯಾರು ಮನೆಯಿಂದ ಹೊರಬಾರದಂತೆ ಲಕ್ಷ್ಮಣರೇಖೆ ಹಾಕಿ ಎಚ್ಚರದಿಂದ ಇರಿ, ರಸ್ತೆಗಿಳಿಯಬೇಡಿ ,ಸೋಂಕು ಪೀಡಿತರಾಗಬೇಡಿ ತಾವು ಸುರಕ್ಷಿತರಾಗಿರಿ ತಮ್ಮಮನೆಯವರನ್ನು ಸುರಕ್ಷಿತರಾಗಿರಿಸಿ ಎಂದೂ ಮನವಿ ಮಾಡಿದ್ದಾರೆ.. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಆದೇಶಗಳನ್ನೂ ಪ್ರತಿಯೊಬ್ಬ ನಾಗರಿಕನೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.(PRI)

Leave A Reply

Your email address will not be published.