ಇನ್ನು ದೇಶಕ್ಕೆ ದೇಶವೇ 21 ದಿನ ಲಾಕ್ ಡೌನ್ । ನರೇಂದ್ರ ಮೋದಿ ಘೋಷಣೆ | ಘರ್ ಸೆ ಬಾಹರ್ ನ ನಿಕ್ಲೆ – ಒಂದೇ ಮಂತ್ರ !

ಇವತ್ತು ಮಧ್ಯರಾತ್ರಿ 12 ಗಂಟೆಯ ನಂತರ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಜನತಾ ಕರ್ಫ್ಯು ಕ್ಕಿಂತ ಭಿನ್ನವಾದ ಲಾಕ್ ಡೌನ್ ಇದಾಗಿರುತ್ತದೆ. ಇದು ಆರ್ಥಿಕ ಹಿನ್ನಡೆಗೆ ಕಾರಣ ಆಗುತ್ತದೆ.

ಆದರೆ ದೇಶದ ಜನರ ಆರೋಗ್ಯಕ್ಕಾಗಿ, ನಮ್ಮ ಕುಟುಂಬದ ರಕ್ಷಣೆಗಾಗಿ ಇಡೀ ದೇಶ ಮೂರು ವಾರ ಅಂದರೆ 21 ದಿನ ಲಾಕ್ ಡೌನ್ ಆಗಲಿದೆ. ಹಾಗಂತ ಮೋದಿ ದನಿ ಎತ್ತರಿಸಿ ಮಾತಾಡಿ ಹೇಳಿದ್ದಾರೆ. ಕೊನೆಯದಾಗಿ ಎರಡೂ ಕೈ ಮುಗಿದು ಜನರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

 • ಮೂರು ವಾರ-21 ದೇಶಕ್ಕೆ ದೇಶವೇ ಬಂದ್
 • ಮೂರು ವಾರ-21 ದೇಶಕ್ಕೆ ದೇಶವೇ ಬಂದ್. ಮನೆ ಬಿಟ್ಟು ಹೋಗಬಾರದು
 • ರೋಡಿಗೆ ಇಳಿಯಬಾರದು
 • 100 % ಆಗಿ ಸರಕಾರದ ಆದೇಶವನ್ನು ಪಾಲಿಸಿ. ಮನೆಯಲ್ಲಿ ಇರಿ. ಮನೆಯಲ್ಲಿಯೇ ಇರಿ.
 • ಘರ್ ಸೆ ಬಾಹರ್ ನ ನಿಕ್ಲೆ ಘರ್ ಸೆ ಬಾಹರ್ ನ ನಿಕ್ಲೆ …. ಘರ್ ಸೆ ಬಾಹರ್ ನ ನಿಕ್ಲೆ
 • ನಿಮ್ಮ ಆರೋಗ್ಯ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕಿಂತ ದೊಡ್ಡದು ಬೇರೆ ಯಾವುದೂ ಇಲ್ಲ
 • ನಿಮ್ಮವರ ಸ್ವಾಸ್ಥ್ಯಕ್ಕಾಗಿ ಇಡೀ ವೈದ್ಯ ಲೋಕವೇ ಟೊಂಕ ಕಟ್ಟಿ ದುಡಿಯುತ್ತಿದೆ.
 • ವೈದ್ಯರು, ನರ್ಸುಗಳು,ವಾರ್ಡ್ ಬಾಯ್, ಆಂಬುಲೆನ್ಸ್ ಡ್ರೈವರ್ ಗಳು, ಹೌಸ್ ಕೀಪರ್ ಗಳು, ಪೊಲೀಸರು ಎಲ್ಲರೂ ಹಗಲಿರುಳೆನ್ನದೆ ಕೆಲಸ ಮಾಡುತ್ತಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ.
 • ನೀವು ಏನು ಕೂಡಾ ಮಾಡಬೇಕಿಲ್ಲ. ಕೇವಲ ಮನೆಯಲ್ಲಿ ಇದ್ದರೆ ಸಾಕು.
 • ಘರ್ ಸೇ ಬಾಹರ್ ನ ನಿಕ್ಲೆ ( ಮನೆಯಿಂದ ಹೊರಗಡೆೆ ಹೋಗಬೇಡಿ )
 • ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಿ
 • ಇನ್ನು 21 ದಿನಗಳ ನಂತರ ನಾವು ಆರೋಗ್ಯವಂತರಾಗಿ ಈ ಸಮಸ್ಯೆಯಿಂದ ಹೊರಬರಲಿದ್ದೇವೆ

ಇದು ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಭಾಷಣದ ತಾತ್ಪರ್ಯ. ದೇಶದ ಪ್ರಧಾನಿಯ ಆದೇಶವನ್ನು, ಪ್ರಾರ್ಥನೆಯನ್ನು ನಾವೆಲ್ಲಾ ಪಾಲಿಸಬೇಕು. ನಾವೇನೂ ಮಾಡಬೇಕಿಲ್ಲ. ಮನೆ ಬಿಟ್ಟು ಹೊರ ಬರಬೇಡಿ. ಘರ್ ಸೆ ಬಾಹರ್ ನ ನಿಕ್ಲೇ.


Ad Widget

Ad Widget

Ad Widget

Ad Widget

Ad Widget

Ad Widget

ಘರ್ ಸೇ ಬಾಹರ್ ನ ನಿಕ್ಲೆ

error: Content is protected !!
Scroll to Top
%d bloggers like this: