ಮುಂಡಾಜೆ ಮೂಲದ ಹೋಟೆಲ್ ಉದ್ಯಮಿ, ಬೆಳಾಲು ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಗಂಗಾಧರ ಫಡ್ಕೆ ನಿಧನ

ಬೆಳ್ತಂಗಡಿ ತಾಲೂಕು ಮುಂಡಾಜೆ ಮೂಲದ, ಗಂಗಾಧರ ಫಡ್ಕೆ ಅವರು ಶನಿವಾರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಕೃಷಿಕರಾಗಿದ್ದ ಮತ್ತು ಅತ್ಯಂತ ಸ್ನೇಹಜೀವಿಯಾಗಿದ್ದ ಗಂಗಾಧರ ಫಡ್ಕೆ ಅವರು ಬೆಳಾಲು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕಾರ‌್ಯದರ್ಶಿಯಾಗಿ ಕಾರ‌್ಯನಿರ್ವಹಿದ್ದರು‌. ಕೃಷಿಯ ಜತೆ ಬೆಳ್ತಂಗಡಿಯಲ್ಲಿ ಹೋಟೇಲ್ ಉದ್ಯಮವನ್ನೂ ಕೈಗೊಂಡು ಅದರಲ್ಲೂ ಯಶಸ್ಸು ಕಂಡಿದ್ದಾರೆ.

ತಮ್ಮ ರಿಟೈರ್ ಮೆಂಟಿನ ನಂತರ  ಅವರು ಕುಟುಂಬ ಸಮೇತ ಮೈಸೂರಿನಲ್ಲಿ ನೆಲೆಸಿ ಅಲ್ಲಿಯೇ ಮಗನ ಜತೆ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡರು.

ಅವರು ಕೆಲಕಾಲದಿಂದ ಅನಾರೋಗ್ಯಕ್ಕೆ ಈಡಾಗಿದ್ದರು. ಪತ್ನಿ ಉಮಾ ಜಿ. ಫಡ್ಕೆ, ಪುತ್ರ ಹೋಟೇಲ್ ಉದ್ಯಮಿ ದಿವಾಕರ ಫಡ್ಕೆ, ಪುತ್ರಿಯರಾದ ಭರತ ನಾಟ್ಯ ಕಲಾವಿದೆ ಡಾ. ಕೃಪಾ ಫಡ್ಕೆ, ಡಾ. ದೀಪಾ ಫಡ್ಕೆ , ರೂಪಾ ಮರಾಠೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave A Reply

Your email address will not be published.