ಕಾವು | ವಿದ್ಯುತ್ ಸಬ್‌ಸ್ಟೇಷನ್ ಲೋಕಾರ್ಪಣೆ | ಈಡೇರಿತು ಬಹುಕಾಲದ ಕನಸು

ಪುತ್ತೂರು : ಕಾವಿನಲ್ಲಿ ನಿರ್ಮಾಣಗೊಂಡ 33ಕೆವಿ ಸಬ್‌ಸ್ಟೇಷನ್ ಮಾ.21ರಂದು ಉದ್ಘಾಟನೆಗೊಂಡಿತು. ಈ ಮೂಲಕ ಬಹು ಸಮಯಗಳ ಬೇಡಿಕೆ ಈಡೇರಿದಂತಾಗಿದೆ.

ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ ಹಲವು ಸಮಯದ ಬೇಡಿಕೆ ಈಡೇರಿದ್ದು ಈ ಸಬ್‌ಸ್ಟೇಷನ್‌ನಿಂದ ಕುಂಬ್ರ, ಈಶ್ವರಮಂಗಲ, ಬೆಟ್ಟಂಪಾಡಿಗೆ 24X7 ಗಂಟೆಯೂ ಅನಿಯಮಿತ ವಿದ್ಯುತ್ ಪೂರೈಕೆಯಾಗುತ್ತದೆ. ಇದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷೆ ಲಲಿತಾ ಈಶ್ವರ, ಜಿ.ಪಂ.ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಮೆಸ್ಕಾಂ ಸಹಾಯಕ ಇಂಜಿನಿಯರ್ ಮಂಜಪ್ಪ, ಎಕ್ಸಿಕ್ಯೂಟಿವ್ ಇಂಜಿನಿಯರ್ ನರಸಿಂಹ, ಬಿ.ಟಿ. ಪದ್ಮಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.