ಓಂತ್ರಡ್ಕ ಶಾಲಾ ಶಿಕ್ಷಕ ದಿಲೀಪ್ ಲೇಖನ | ಶಿಕ್ಷಣ ಸಚಿವರ ಮೆಚ್ಚುಗೆ

ಕಡಬ ತಾಲೂಕು ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಪದವಿದರ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ಅವರ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ದೂರವಾಣಿ ಮುಖಾಂತರ ಶಿಕ್ಷಕರೊಂದಿಗೆ ವಿಶ್ಲೇಷನೆ ಪಡೆದಿದ್ದಾರೆ


Ad Widget

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಗಾಗಿ ಕ್ಯೂ ನಿಲ್ಲುವ ಸನ್ನಿವೇಶ ಸೃಷ್ಟಿಯಾಗಬೇಕು ಎನ್ನುವ ಆಶಯವನ್ನು ಇತ್ತೀಚೆಗೆ ಸಚಿವರು ವ್ಯಕ್ತಪಡಿಸಿದ್ದರು. ದಾಖಲಾತಿಗಾಗಿ ಕ್ಯೂ ನಿಲ್ಲಬೇಕು ಎನ್ನುವ ವಿಚಾರದಲ್ಲಿ ಉದಯಕಾಲ ಪತ್ರಿಕೆಯಲ್ಲಿ ದಿಲೀಪ್ ಬರೆದ ಲೇಖನ ಪ್ರಕಟವಾಗಿರುವುದನ್ನು ಕಂಡು ದೂರವಾಣಿ ಕರೆ ಮಾಡಿ ಲೇಖನ ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜತೆಗೆ ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಯ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದ್ದಾರೆ.


Ad Widget

ಸಮಯ ಸಂದರ್ಭ ಬಂದಾಗ ನಿಮ್ಮನ್ನು‌ ಸಂರ್ಪಕಿಸಲಾಗುವುದು ಎಂದ ಸಚಿವರು ಸರ್ಕಾರಿ ಶಾಲಾ ಬಗೆಗಿನ ಅಭಿಮಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ


Ad Widget
error: Content is protected !!
Scroll to Top
%d bloggers like this: