ಶಾಂತಿಮೊಗರು-ಕುದ್ಮಾರು ಸಂಪರ್ಕ ರಸ್ತೆ ಅಭಿವೃದ್ಧಿ : ವೇಗ ಪಡೆದುಕೊಂಡ ಕಾಮಗಾರಿ
ಸವಣೂರು : ಕುದ್ಮಾರು ಹಾಗೂ ಆಲಂಕಾರು ಗ್ರಾಮಗಳ ಮಧ್ಯೆ ಬರುವ ಶಾಂತಿಮೊಗರು ಎಂಬಲ್ಲಿ ಕುಮಾರಧಾರ ನದಿಗೆ ನಿರ್ಮಾಣವಾದ ಸೇತುವೆಯ ಸಂಪರ್ಕ ರಸ್ತೆಯ ಮರು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸುಸಜ್ಜಿತ ರಸ್ತೆ ನಿರ್ಮಾಣ ಕನಸು ಸಾಕಾರಗೊಳ್ಳುತ್ತಿದೆ.
ಕುದ್ಮಾರು ದ್ವಾರದ ಬಳಿಯಿಂದ ಸುಮಾರು ಎಂಟು ನೂರು ಮೀಟರ್ ರಸ್ತೆ ಡಾಮರೀಕರಣ ಕಾರ್ಯಕ್ಕಾಗಿ ರಸ್ತೆ ಅಗಲೀಕರಣ ಹಾಗೂ ಇತರ ಕಾರ್ಯಗಳು ನಡೆಯುತ್ತಿವೆ.
ಶಾಂತಿಮೊಗರುವಿನಲ್ಲಿ ಸೇತುವೆ ನಿರ್ಮಾಣವಾದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರ ಅಽಕವಾಗಿವಾಗಿರುವುದರಿಂದ ಸಹಜವಾಗಿಯೇ ಜನರಲ್ಲಿ ಅಸಹನೆ ಉಂಟಾಗಿತ್ತು. ಡಾಮರೀಕರಣಕ್ಕಾಗಿ ಶಾಸಕ ಎಸ್.ಅಂಗಾರ ಸರಕಾರಕ್ಕೆ ಸುಮಾರು ಒಂದು ಕೋಟಿ ರೂ.ನ ಪ್ರಸ್ತಾವನೆ ಸಲ್ಲಿಸಿದ್ದರು.
ಅನುದಾನ ಕೊರತೆ ಹಿನ್ನೆಲೆಯಲ್ಲಿ ಅದು ವಿಳಂಬವಾಯಿತು.
ಬಳಿಕ ಶಾಸಕರ ಶಿಫಾರಸ್ಸಿನ ಮೇರೆಗೆ ೩೪ ಲಕ್ಷ ರೂ ಅನುದಾನ ಲೋಕೋಪಯೋಗಿ ಇಲಾಖೆ ಮುಖಾಂತರ ಬಿಡುಗಡೆಗೊಂಡು ತಾತ್ಕಾಲಿಕವಾಗಿ ಮೂರು ಮೀಟರ್ ಅಗಲದ ಏಕರಸ್ತೆ ನಿರ್ಮಾಣವಾಯಿತು.
೫.೫ ಮೀಟರ್ ಅಗಲದ ರಸ್ತೆಯನ್ನೇ ನಿರ್ಮಾಣ ಮಾಡಬೇಕೆಂಬ ಒತ್ತಾಸೆ ಈಡೇರದೆ ಏಕ ರಸ್ತೆ ನಿರ್ಮಾಣವಾಗಿ ಒಂದೇ ವರ್ಷದಲ್ಲಿ ಆ ರಸ್ತೆಯನ್ನು ಅಗೆದು ೫.೫ ಮೀಟರ್ ಅಗಲದ ರಸ್ತೆ ಕಾಮಗಾರಿಗೆ ಚಾಲನೆ ದೊರೆತಿದೆ.
ಕುದ್ಮಾರಿನಿಂದ ಶಾಂತಿಮೊಗುರು ತನ ೮೦೦ ಮೀಟರ್ ಹಾಗೂ ಆಲಂಕಾರಿನಿಂದ ನೆಲ್ಯಾಡಿಗೆ ಸಂಪರ್ಕಿಸುವ ರಸ್ತೆಯ ಮೂರುವರೆ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಒಟ್ಟು ೫ ಕೋಟಿ ರೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಕಾರದಿಂದ ಬಿಡುಗಡೆಯಾಗಿದ್ದು, ಇದರಲ್ಲಿ ಸೇತುವೆ ಬಳಿ ಆರಂಭಿಕ ಕಾಮಗಾರಿ ನಡೆಯುತ್ತಿದೆ. ರಸ್ತೆ ನಿರ್ಮಾಣದ ಎಲ್ಲಾ ಜವಾಬ್ದಾರಿಯನ್ನು ಪ್ರಾಕರದವರೇ ವಹಸಿಕೊಂಡಿದ್ದಾರೆ.
ಲೋಕೋಪಯೋಗಿ ಇಲಾಖಾ ಅಕಾರಿಗಳು ಮೇಲ್ವಿಚಾರಣೆ ನೋಡಿಕೊಂಡರೆ ಕುಮಟಾ ಮೂಲದ ಬಿ.ಜೆ ಸುವರ್ಣ ಎಂಬವರು ಗುತ್ತಿಗೆದಾರಾಗಿದ್ದಾರೆ.
ಕುದ್ಮಾರಿನಿಂದ ಶಾಂತಿಮೊಗರು ತನಕ ರಸ್ತೆ ಅಭಿವೃದ್ಧಿ ಕಾರ್ಯ ಶೀಘ್ರದಲ್ಲಿ ಕೊನೆಗೊಳ್ಳಲಿದೆ.
ಶಾಂತಿಮೊಗರು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯ ಎ.೩ರಿಂ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಈ ಭಾಗದ ಕಾಮಗಾರಿ ಮುಗಿಯಲಿದೆ, ಬಳಿಕ ಆಲಂಕಾರಿನಿಂದ ಕಾಮಗಾರಿ ಪ್ರಾರಂಭವಾಗಲಿದ್ದು ರಾಜ್ಯ ಹೆದ್ದಾರಿಯಾಗಿ ಅಭಿವೃದ್ಧಿ ಹೊಂದುತ್ತಿದೆ.
ಕುದ್ಮಾರಿನಿಂದ ಶಾಂತಿಮೊಗರು ತನಕ ನಡೆಯುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ, ಧೂಳು ತುಂಬಿ ರೋಗ ಹರಡುವ ಭೀತಿ ಎದುರಾಗಿತ್ತು,ಅಲ್ಲದೆ ನಿಧಾನಗತಿಯ ಕಾಮಗಾರಿಯಿಂದಾಗಿ ಮಾರ್ಚ್ ಅಂತ್ಯದೊಳಗೆ ರಸ್ತೆ ಅಗಲೀಕರಣ ಡಾಮರೀಕರಣ ಪೂರ್ಣವಾಗದೆಂಬ ಆತಂಕದಿಂದ ಇಲ್ಲಿನ ಸಾರ್ವಜನಿಕರು ಸಭೆ ಸೇರಿ ಪ್ರತಿಭಟನೆ ನಡೆಸುವ ಸಿದ್ದತೆ ನಡೆಸಿದ್ದರು.
ಬಳಿಕ ಅಽಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕಾಮಗಾರಿ ನಿಗದಿತ ದಿನದೊಳಗೆ ಮುಗಿಸುವ ಕುರಿತು ಭರವಸೆ ನೀಡಿದ್ದರು.ಅದರಂತೆ ಈಗ ಕಾಮಗಾರಿ ವೇಗ ಪಡೆದುಕೊಂಡಿದೆ.
ಮೂರು ದಶಕಗಳ ಬೇಡಿಕೆ ಈಡೇರಿದೆ
ಶಾಂತಿಮೊಗರು ಎಂಬಲ್ಲಿ ಸೇತುವೆ ನಿರ್ಮಾಣವಾಗಬೇಕು, ಇಲ್ಲಿ ರಸ್ತೆಗಳು ಅಭಿವೃದ್ಧಿಯಾಗಬೇಕು, ಆ ಮೂಲಕ ಸವಣೂರು, ಕುದ್ಮಾರು, ಕಾಣಿಯೂರು ಭಾಗದ ಜನರಿಗೆ ಆಲಂಕಾರು ನೆಲ್ಯಾಡಿ, ಕಡಬ, ಧರ್ಮಸ್ಥಳಕ್ಕೆ ಸುಲಭ ಸಂಪರ್ಕ ಆಗಬೇಕು, ಮಾತ್ರವಲ್ಲ ಅಪಾಯಕಾರಿ ನಾಡದೋಣಿ ಕಡವಿಗೆ ಮುಕ್ತಿ ದೊರೆಯಬೇಕು, ಮೈಸೂರಿನಿಂದ ಸುಳ್ಯ-ಬೆಳ್ಳಾರೆ-ಸವಣೂರು-ಶಾಂತಿಮೊಗೇರು-ಆಲಂಕಾರು-ನೆಲ್ಯಾಡಿ-ಧರ್ಮಸ್ಥಳಕ್ಕೆ ಸುಲಭ ಸಂಪರ್ಕವಾಗಬೇಕು ಎನ್ನುವ ಸುಮಾರು ೩೦ ವರ್ಷದ ಬೇಡಿಕೆಗೆ ಈಗಾಗಲೇ ಈಡೇರಿದೆ.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಡಿಯಲ್ಲಿ ಸುಮಾರು ೧೫ ಕೋಟಿ ರೂ ವೆಚ್ಚದಲ್ಲಿ ೨೨೫ ಮೀಟರ್ ಉದ್ದ, ನದಿ ಪಾತ್ರದಿಂದ ೧೮ ಮೀಟರ್ ಎತ್ತರ, ಹನ್ನೆರಡು ಮೀಟರ್ ಅಗಲದ ಒಂಬತ್ತು ಪಿಲ್ಲರ್‌ಗಳ, ಎರಡು ಕಡೆ ಸಂಪರ್ಕ ರಸ್ತೆಗೆ ಎರಡು ಅಬೇಟ್‌ಮೆಂಟ್, ಹಾಗೇ ೨೧.೬ ಮೀಟರ್ ಅಂತರದ ಅಂಕಣ(ಕಿಂಡಿ)ಗಳ ಸುಸಜ್ಜಿತ ಸರ್ವಋತು ಸೇತುವೆ ನಿರ್ಮಾಣವಾಗಿದೆ.
ಆಲಂಕಾರಿನಿಂದ ಸೇತುವೆಯ ತನಕ ೪.೫ ಕಿಲೋಮೀಟರ್ ರಸ್ತೆಯನ್ನು ಆರು ಕೋಟಿ ರೂ ವೆಚ್ಚದಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇಷ್ಟು ಅಭಿವೃದ್ಧಿ ಪರ್ವ ನಡೆದು ಸರಿಸುಮಾರು ಮೂರು ವರ್ಷಗಳು ಸಂದುತ್ತಾ ಬಂದಿದೆ. ಇದೀಗ ಸಂಪರ್ಕ ರಸ್ತೆಯ ಉಳಿಕೆ ಭಾಗ ಕೂಡಾ ಸರ್ವಋತು ರಸ್ತೆಯಾಗಿ ಅಭಿವೃದ್ದಿಯಾಗುತ್ತಿದ್ದು, ಮೂರು ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಶಾಂತಿಮೊಗರು ಸೇತುವೆಗೆ ಅನುದಾನ ಮಂಜೂರಾಗಿ ಸುಮಾರು ೧೫.೫ ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. ಸೇತುವೆಯ ಸಂಪರ್ಕ ಸೇತುವೆಯನ್ನು ಕಳೆದ ವರ್ಷ ಅನಿವಾರ್ಯವಾಗಿ ಏಕ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ರಾಜ್ಯ ಸರಕಾರದ ಹೆದ್ದಾರಿ ಅಭಿವೃದ್ಧಿ ಪ್ರಾಕಾರದ ಅಡಿಯಲ್ಲಿ ಸಂಪರ್ಕ ರಸ್ತೆ ಹಾಗೂ ಆಲಂಕಾರಿನಿಂದ ನೆಲ್ಯಾಡಿ ರಸ್ತೆಯ ೩.೫ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ೫ ಕೋಟಿ ರೂ ಬಿಡುಗಡೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿಯಾಗುವಾಗ ಸಾರ್ವಜನಿಕರು ಸಹಕರಿಸಬೇಕು . ನಮ್ಮ ಸರಕಾರ ಆಡಳಿತದಲ್ಲಿರುವಾಗ ಹೆಚ್ಚು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ.
–ಎಸ್.ಅಂಗಾರ. ಶಾಸಕರು ಸುಳ್ಯ ವಿಧಾನ ಸಭಾ ಕ್ಷೇತ್ರ.