SSLC EXAM : ಎಸ್ ಎಸ್ ಎಲ್ ಸಿ ಪರೀಕ್ಷೆ 2,3 ವೇಳಾಪಟ್ಟಿ ಇಲ್ಲಿದೆ!

SSLC EXAM: ಹತ್ತನೇ ತರಗತಿ ಪರೀಕ್ಷೆ-2, 3ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು ಮೇ 26 ರಿಂದ ಪರೀಕ್ಷೆ ಆರಂಭಗೊಂಡು, ಜೂನ್ 2 ರವರೆಗೆ ನಡೆಯಲಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ವೇಳಾಪಟ್ಟಿ ಹೀಗಿದೆ:
ಮೇ 26 ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ಎನ್ ಸಿ ಇ ಆರ್ ಟಿ, ಸಂಸ್ಕೃತ.
ಮೇ 27 ರಂದು ಕೋರ್ ಸಬ್ಜೆಕ್ಟ್ ಗಣಿತ, ಸಮಾಜ ಶಾಸ್ತ್ರ
ಮೇ 28 ರಂದು ದ್ವಿತೀಯ ಭಾಷೆ -ಇಂಗ್ಲೀಷ್, ಕನ್ನಡ
ಮೇ 29 ರಂದು ಕೋರ್ ಸಬ್ಜೆಕ್ಟ್ 3 ಸಮಾಜ ವಿಜ್ಞಾನ
ಮೇ 30 ರಂದು ತೃತೀಯ ಭಾಷೆ-పింది NCERT , ಹಿಂದಿ , ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು. ಎನ್ ಎಸ್ ಕ್ಯೂ ಎಫ್ ವಿಷಯಗಳಾದಂತ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಬ್ಯೂಟಿ ಅಂಡ್ ವೆಲ್ ನೆಸ್, ಆಪರೆಲ್ ಮೇಡ್ ಆಪ್ಸ್ ಮತ್ತು ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ ವೇರ್.
ಮೇ 31 ರಂದು ಕೋರ್ ಸಬ್ಜೆಕ್ಟ್ ರಾಜ್ಯ ಶಾಸ್ತ್ರ ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
ಜೂನ್ 2 ರಂದು ಜೆಟಿಎಸ್ ವಿಷಯಗಳಾದಂತ ಎಲಿಮೆಂಟ್ಸ್ ಆಫ್ ಎಲೆಕ್ನಿಕಲ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV, ಪ್ರೋಗ್ರಾಮಿಂಗ್ ಇನ್ ANSI C, ಅರ್ಥಶಾಸ್ತ್ರ
ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಫಲಿತಾಂಶ ಪಡೆದಿರುವ ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ದಿನಾಂಕ ಮೇ 3 ರಿಂದ 10 ರೊಳಗೆ ನೋಂದಾಯಿಸಿಕೊಳ್ಳಬಹುದಾಗಿದ್ದು ಎಸ್ ಎಸ್ ಎಲ್ ಸಿ 2025ರ ಪರೀಕ್ಷೆ-3 ದಿನಾಂಕ ಜೂನ್ 23 ರಿಂದ ಜೂನ್ 30 ರವರೆಗೆ ನಡೆಯಲಿದೆ.
Comments are closed.