ಸವಣೂರು : ಸ್ವಚ್ಚತಾ ಪಕ್ವಾಡ ,ಸ್ವಚ್ಚತಾ ಕಾರ್ಯಕ್ರಮ
ಸವಣೂರು : ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು,ರಾಮಕೃಷ್ಣ ಮಿಷನ್ ಮಂಗಳೂರು,ಸವಣೂರು ಗ್ರಾಮ ಪಂಚಾಯತ್ ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ,ಶ್ರೀ ಗೌರಿ ಯುವತಿ ಮಂಡಲ ಇದರ ವತಿಯಿಂದ ನಡೆದ ಸ್ವಚ್ಚತಾ ಪಕ್ವಾಡದ ಅಂಗವಾಗಿ ಸವಣೂರು ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯರಾದ ಪ್ರಕಾಶ್ ಕುದ್ಮನಮಜಲು,ಸತೀಶ್ ಬಲ್ಯಾಯ,ಗಾಯತ್ರಿ ಬರೆಮೇಲು,ರಾಜೀವಿ ಶೆಟ್ಟಿ,ಸಿಬಂದಿ ಜಯಶ್ರೀ,ಜಯಾ ಕೆ, ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ,ಶಿವರಾಮ ಗೌಡ ಮೆದು,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ನಿರ್ದೇಶಕ ಚೇತನ್ ಕುಮಾರ್ ಕೋಡಿಬಲು,ಪ್ರಮೀಳಾ ಪ್ರಕಾಶ್ ಕುದ್ಮನಮಜಲು,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ರೈ ಬಲಾಡಿ,ಕಾರ್ಯದರ್ಶಿ ಉದಯ ಬಿ.ಆರ್ ಬಂಬಿಲ,ಸದಸ್ಯರಾದ ರಕ್ಷಿತ್ ಬಂಬಿಲ,ಸಂತೋಷ್ ,ಸತ್ಯಪ್ರಕಾಶ್ ,ತಾರೇಶ್ ಕುಂಜಾಡಿ,ಜಗದೀಶ್ ಮಂಜುನಾಥನಗರ ಮೊದಲಾದವರಿದ್ದರು.