ಅಜಿತ್ ಗೌಡ ಐವರ್ನಾಡು ಇವರಿಗೆ ಗಡಿನಾಡ ಧ್ವನಿ ಜಾನಪದ ಸಿರಿ ರಾಜ್ಯ ಪ್ರಶಸ್ತಿ


ಗಡಿನಾಡ ಧ್ವನಿ ,ಗಡಿನಾಡ ಶ್ರೇಯೋಭಿವೃದ್ದಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ಜಾನಪದ ಸಿರಿ ರಾಜ್ಯ ಪ್ರಶಸ್ತಿಗೆ  ಮಧ್ಯಸ್ಥ ಅಜಿತ್ ಗೌಡ ಐವರ್ನಾಡು ಆಯ್ಕೆ ಯಾಗಿರುತ್ತಾರೆ.
ರಾಜ್ಯದಲ್ಲಿ ಇವರ ಎಲ್ಲಾ ಕ್ಷೇತ್ರದ ಸಾಧನೆಗಳನ್ನ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು  ಎಪ್ರಿಲ್ 4 ರಂದು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಗಣ್ಯಾತಿ ಗಣ್ಯರ ಮುಂದೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.


ಐವರ್ನಾಡಿನ ಗುತ್ತಿಗಾರು ಮೂಲೆ ಚಂದ್ರಹಾಸ ರೇಂಜರ್ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಲೀಲಾವತಿ ಎ ದಂಪತಿಗಳ ಪುತ್ರನಾಗಿರುವ ಇವರು ತನ್ನ ಶಾಲಾ ಕಾಲೇಜು ದಿನಗಳಲ್ಲಿ ಯಕ್ಷಗಾನ ,ನಾಟಕ ರಂಗದಲ್ಲಿ ವಿವಿಧ ಕ್ಷೇತ್ರದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ದೈವದ ಹಾಗೂ ಕುಟುಂಬದ ಪಂಚಾತಿಕೆಯಲ್ಲಿ ಮದ್ಯಸ್ಥನಾಗಿ  ಗುರುತಿಸಿ ಪ್ರಸಿದ್ಧಿ ಪಡೆದು ,ಸತತ ಏಳು ವರುಷಗಳಿಂದ ಸುಳ್ಯ ,ಪುತ್ತೂರು ,ಬಂಟ್ವಾಳ ,ಬೆಳ್ತಂಗಡಿ ಪ್ರದೇಶದಲ್ಲಿ ತನ್ನದೇ ಆದ ಚಾಪು ಮೂಡಿಸಿದವರು ಪ್ರಸ್ತುತ ಕೆ ಎಸ್ ಗೌಡ ವಿದ್ಯಾಸಂಸ್ಥೆ ನಿಂತಿಕಲ್ಲಿನಲ್ಲಿ ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುವುದರೊಂದಿಗೆ ಕೃಷಿ ಹಾಗೂ ದೈವದ ಸೇವೆಯನ್ನು ನಡೆಸಿಕ್ಕೊಂಡು ಬರುತ್ತಿದ್ದಾರೆ.

Leave A Reply

Your email address will not be published.