ಮಾ.14 | ಪುತ್ತೂರು ತಾ. ಪಂ. ಸಭಾಂಗಣದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಾಗಾರ

ಪುತ್ತೂರು: ಭಾರತ ಸರಕಾರ ನೆಹರು ಯುವ ಕೇಂದ್ರ ಮಂಗಳೂರು ಇದರ ನೇತೃತ್ವದಲ್ಲಿ ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು ಇದರ ಆಶ್ರಯದಲ್ಲಿ ಮಾ.14ರಂದು ಪುತ್ತೂರು ತಾ.ಪಂ.ಸಭಾಂಗಣದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಗಾರ ನಡೆಯಲಿದೆ.

 

ಏನಿದು ?

ಭಾರತ ಇಂದು ಯುವರಾಷ್ಟ್ರ ! ತನ್ನೆಲ್ಲಾ ಯುವ ಬಲಾಢ್ಯವನ್ನು ಒಗ್ಗೂಡಿಸಿಕೊಂಡು ಜಗತ್ತಿನ ಪ್ರಬಲ ರಾಷ್ಟ್ರವಾಗಿ ಮುನ್ನಡೆಯುತ್ತಿದೆ. ಅದಕ್ಕೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯಚರಿಸುತ್ತಿರುವ ಯುವಕ ಮಂಡಲಗಳೂ ಒಂದು ಕಾರಣವಾಗಿದೆ. ಇದೀಗ ಅಂತಹ ಯುವಕ ಮಂಡಲಗಳಿಗೆ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಲು ಒಂದು ಸುವರ್ಣವಕಾಶ ಒದಗಿ ಬಂದಿದೆ.

ಯುವ ಮಂಡಲ ಅಭಿವೃದ್ಧಿ ಕಾರ್ಯಗಾರ

ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ಮತ್ತು ಹೊಸದಾಗಿ ರಚನೆ ಮಾಡಲು ಆಸಕ್ತರು ಈ ಕಾರ್ಯಗಾರದಲಿ ಖಡ್ಡಾಯವಾಗಿ ಭಾಗವಹಿಸಿ ಭಾರತ ಸರಕಾರದಿಂದ ನೆಹರು ಯುವ ಕೇಂದ್ರ ಮೂಲಕ ಒದಗುವ ಸವಲತ್ತುಗಳ ಬಗ್ಗೆ ಸದುಪಯೋಗ ಪಡೆದುಕೊಳ್ಳಿ. ಮಾನವ ಸಂಘ ಜೀವಿ. ಸಂಘವಿದ್ದರೆ ಮಾತ್ರ ಆತ ಬದುಕಬಲ್ಲ. ನಿಮ್ಮೂರಿನಲ್ಲಿ ನೀವೊಂದು ಯುವಕ ಮಂಡಲ ರಚಿಸಿ ಸಂಘ ಜೀವಿಗಳಾಗಿ ಬದುಕುತ್ತಿದ್ದೀರೋ ಇದೀಗ, ಇಡೀ ಪುತ್ತೂರಿನ ಯುವಕಮಂಡಲಗಳು ಒಗ್ಗೂಡುವ ಒಂದು ಕಾಲಘಟ್ಟವಾಗಿದೆ.

ಹಾಗಾಗಿ, ದಯವಿಟ್ಟು, ತಮ್ಮ ಯುವಕ ಮಂಡಲದ ಓರ್ವ ಸದಸ್ಯ ಅಥವಾ ಯುವಕ ಮಂಡಲದ ಪೂರ್ತಿ ಸದಸ್ಯರು ಭಾಗವಹಿಸಿ ತಮ್ಮ ಯುವಕ ಮಂಡಲದ ಜೊತೆಗೆ ತಮ್ಮೂರಿನ ಅಭಿವೃದ್ಧಿಗೆ ಕಾರಣೀಭೂತರಾಗಿ. ಹೊಸ ಯುವಕ ಮಂಡಲಗಳಿಗೂ ಪ್ರಾಧಾನ್ಯತೆ : ನೆಹರು ಯುವ ಕೇಂದ್ರದ ಜೊತೆ ನೋಂದಣಿ ಮಾಡಿಕೊಂಡವರು ಹಾಗೂ ನೋಂದಣಿ ಬಾಕಿ ಇರುವವರಿಗೆ ನೋಂದಣಿ ಮಾಡಿಸಲೂ ಸುವರ್ಣವಕಾಶವಿದೆ.

ಅದೇ ರೀತಿಯಲ್ಲಿ, ಹೊಸ ಯುವಕ ಮಂಡಲ ರಚನೆ ಮಾಡುವವರಿಗೂ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಯುವಕ ಮಂಡಲ ರಚನೆಗೆ ಸಂಪೂರ್ಣ ಸಹಕಾರ ನೀಡಲಾಗುವುದು.

ನೆಹರು ಯುವ ಕೇಂದ್ರದಲ್ಲಿ ಹೊಸ ನೋಂದಾವಣಿ ಮರು ನೊಂದಾವನೆ ಮಾಡಲು ಏನೆಲ್ಲ ಬೇಕು?

  • ಕ್ಲಬ್ ಸೀಲ್ *
  • ಬ್ಯಾಂಕ್ ಅಕೌಂಟ್(ಇದ್ದರೆ)
  • ಕ್ಲಬ್ ಅಧ್ಯಕ್ಷರ ಭಾವಚಿತ್ರ
  • ಕ್ಲಬ್ ನೋಂದಾವಣಿ ಮಾಡಿದ್ದರೆ, ನಮೂದಿತ ಸಂಖ್ಯೆ
  • ಸದಸ್ಯರ ಕ್ಲಬ್ ಮತ್ತು ಸಂಪರ್ಕ ಸಂಖ್ಯೆ

Leave A Reply

Your email address will not be published.