ಕಡವೆಗೆ ಡಿಕ್ಕಿ ಹೊಡೆದು ಹೋದ ಅಪರಿಚಿತ ವಾಹನ | ರಸ್ತೆ ಬದಿ ಕಾಲು ಕಳೆದುಕೊಂಡು ನರಳುತ್ತಾ ಬಿದ್ದ ಮೂಕ ಪ್ರಾಣಿ

ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯ ಕುಂಟಿಕಾನ ಎಂಬಲ್ಲಿ ವಾಹನ ಡಿಕ್ಕಿ ಹೊಡೆದು ಕಡವೆಯೊಂದು ಗಾಯಗೊಂಡು ರಸ್ತೆ ಬದಿ ನರಳುತ್ತಾ ಬಿದ್ದ ಘಟನೆ ನಡೆದಿದೆ.

ಅದು ಕುಂಟಿಕಾನ ಬಳಿಯ ಬಲ್ಯ ಕ್ರಾಸ್ ಬಳಿ ಶುಕ್ರವಾರ ನಸುಕಿನ ವೇಳೆ ನಡೆದಿದ್ದು ಡಿಕ್ಕಿಯ ತೀವ್ರತೆಗೆ ಕಡವೆಯ ಒಂದು ಕಾಲು ಮುರಿದಿದೆ. ಯಾವುದೋ ಅಪರಿಚಿತ ವಾಹನ ಅದಕ್ಕೆ ಗುದ್ದಿದ್ದು, ಅದು ಜೀಪಿರಬಹುದು ಅಥವಾ ಅದಕ್ಕಿಂತ ದೊಡ್ಡ ವಾಹನ ಇರಬಹುದು ಎಂದು ಶಂಕಿಸಲಾಗಿದೆ.

ರಸ್ತೆ ಬದಿ ನೋವು ತಿನ್ನುತ್ತಾ ಬಿದ್ದಿದ್ದ ಕಡವೆಯನ್ನು ಗಮನಿಸಿ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಆ ಕೂಡಲೇ ಅವರು ಸ್ಥಳಕ್ಕೆ ಬಂದು ಕಡವೆಯ ರಕ್ಷಣೆಗೆ ಮುಂದಾಗಿದ್ದಾರೆ.

ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಗಿರೀಶ್. ಆರ್. ಉಪ ವಲಯ ಅರಣ್ಯಾಧಿಕಾರಿ ರವಿ ಪ್ರಕಾಶ್, ಅರಣ್ಯ ರಕ್ಷಕರಾದ ರವಿ ಕುಮಾರ್, ರವಿ ಚಂದ್ರ, ಕೆ.ಸುಬ್ರಹ್ಮಣ್ಯ ಭೇಟಿ ನೀಡಿ ಕಾಡು ಪ್ರಾಣಿಯನ್ನು ರಕ್ಷಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಲು ಕಡವೆಯನ್ನು ಕಡಬದ ಪಶುವೈಧ್ಯಕೀಯ ಕೇಂದ್ರಕ್ಕೆ ಕರೆತರಲಾಗಿದೆ.

Leave A Reply

Your email address will not be published.