ಮಂಗಳೂರು ವಿ.ವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ | 15 ನೇ ಬಾರಿಗೆ ಚಾಂಪಿಶಿಪ್ ಪಟ್ಟವನ್ನು ಮುಡಿಗೇರಿಸಿದ ಆಳ್ವಾಸ್ ಕಾಲೇಜು ಮೂಡಬಿದಿರೆ
ಮಂಗಳೂರು : ವಿಶ್ವವಿದ್ಯಾನಿಲಯದ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸತತ ಹದಿನೈದನೇ ಬಾರಿ ವಿಜಯಿಯಾಗಿ ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡ ಪ್ಯಾಬಿಯನ್ ಬಿ ಎನ್ ಕುಲಾಸೋ ರೋಲಿಂಗ್ ಟ್ರೋಫಿಯನ್ನು ತನ್ನ ಮಡಿಲಲ್ಲೇ ಇರಿಸಿಕೊಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಇದರ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಮಾ-9ಮತ್ತು 10ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಬಾಲ್ ಬ್ಯಾಡ್ಮಿಂಟನ್ ಚಾಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆಯಿತು. ಆಳ್ವಾಸ್ ಕಾಲೇಜು ದೈಹಿಕ ಶಿಕ್ಷಣ ತರಬೇತಿ ಕಾಲೇಜು ತಂಡ ದ್ವಿತೀಯ ಸ್ಥಾನಿಯಾಯಿತು. ಸೆಮಿಫೈನಲ್ ನಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡ ಅತಿಥೇಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ತಂಡವನ್ನು ಸೋಲಿಸಿ ಫೈನಲ್ ಗೇರಿತು. ಆಳ್ವಾಸ್ ದೈಹಿಕ ಶಿಕ್ಷಣ ತರಭೇತಿ ಕಾಲೇಜು ತಂಡ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ತಂಡವನ್ನು ಮಣಿಸಿ ಫೈನಲ್ ಪ್ರವೇಶ ಪಡೆಯಿತು.
ಫೈನಲ್ ನಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡ ಆಳ್ವಾಸ್ ದೈಹಿಕ ಶಿಕ್ಷಣ ತರಬೇತಿ ಕಾಲೇಜು ತಂಡ ವನ್ನು ಮಣಿಸಿ 2019-20ನೇ ಸಾಲಿನ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಾ-9ರಂದು ಫ್ರಿಲಿಮಿನರಿ ಸುತ್ತಿನ ಪಂದ್ಯಾಕೂಟಗಳು ನಡೆಯಿತು.
ಒಟ್ಟು ಒಂಬತ್ತು ತಂಡಗಳು ಭಾಗವಹಿಸಿದ ಈ ಸುತ್ತಿನ ಸೆಮಿಫೈನಲ್ ನಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ತರಬೇತಿ ಕಾಲೇಜು ಮೂಡಬಿದಿರೆ ತಂಡ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡವನ್ನು ಸೋಲಿಸಿ ಫೈನಲ್ ಗೆ ಪ್ರವೇಶ ಪಡೆಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ತಂಡ ಸರಕಾರಿ ಪ್ರಥಮ ದರ್ಜೆ ಕಾಲೆಜು ಬೆಟ್ಟಂಪಾಡಿ ತಂಡವನ್ನು ಮಣಿಸಿ ಫೈನಲ್ ಗೆ ಅರ್ಹತೆ ಪಡೆಯಿತು.
ಫೈನಲ್ ನಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ತರಬೇತಿ ಕಾಲೇಜು ಮೂಡಬಿದಿರೆ ತಂಡ ಸರಕಾರಿ ಪ್ರಥಮ ದರ್ಜೆ ಕಾಲೆಜು ಸುಳ್ಯ ತಂಡವನ್ನು ಸೋಲಿಸಿ ಫ್ರಿಲಿಮಿನರಿ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ತಂಡ ಪಡೆಯಿತು. ತೃತೀಯ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು, ಚತುರ್ಥ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೆಜು ಬೆಟ್ಟಂಪಾಡಿ ತಂಡಪಡೆಯಿತು.
ಸಭಾ ಕಾರ್ಯಕ್ರಮ: ಉದ್ಘಾಟನಾ ಕಾರ್ಯಕಮ ಮಂಗಳೂರು ವಿಶ್ವವಿದ್ಯಾನಿಲಯ ಇದರ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ನಡೆದ ಬಾಲ್ ಬ್ಯಾಡ್ಮಂಟನ್ ಚಾಂಪಿಯನ್ ಶಿಪ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಅಚ್ಯುತ ಪೂಜಾರಿ ಕೆ ವಹಿಸಿದ್ದರು.
ಪಂದ್ಯಾಟದ ಉದ್ಘಾಟನೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಆದ ಪುರುಷೋತ್ತಮ ಕಿರ್ಲಾಯ ನೆರವೇರಿಸಿದರು. ಅತಿಥಿಗಳಾಗಿ ವೇದಿಕೆಯಲ್ಲಿ ನಗರ ಪಂಚಾಯತ್ ಸದಸ್ಯರಾದ ವಾಣಿಶ್ರೀ ಬಿ ಎಸ್. ನಿವೃತ್ತ ಶಿಕ್ಷಕರು ಕಾಲೇಜು ಅಭಿವೃದ್ಧಿ ಸಮಿಯ ಸದಸ್ಯರು ಆದ ಮಾದವ ಗೌಡ ಮಡಪ್ಪಾಡಿ ವಿಶ್ವವಿದ್ಯಾನಿಲಯದಿಂದ ಪಂದ್ಯಾಟದ ವೀಕ್ಷಕರಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇಲ್ಲಿಯ ದೈಹಿಕ ಶಿಕ್ಷಣ ಬೋಧಕರಾದ ಪ್ರವೀಣ್ ಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ಬೋಧಕರಾದ ಸತೀಶ್ ಕುಮಾರ್ ಕೆ ಆರ್. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಬೋಧಕರಾದ ಸತೀಶ್ ಕುಮಾರ್ ಕೆ ಆರ್ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಲತಾ ಎಂ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಪುಷ್ಪರಾಜ್ ಕೆ ಕಾರ್‍ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಅಚ್ಯುತ ಪೂಜಾರಿ ಕೆ ವಹಿಸಿದ್ದರು. ಬಹುಮಾನ ವಿತರಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಜತೆ ಕಾರ್‍ಯದರ್ಶಿ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಬೋಧಕರಾದ ರಾಧಾಕೃಷ್ಣ ಮಾಣಿಬೆಟ್ಟು ಭಾಗವಹಿಸಿದ್ದರು.
ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಗದೀಶ ಸರಳಿಕುಂಜ ಕಾಲೇಜು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಶಶಿಕಲಾ ನೀರಬಿದಿg, ಪಂದ್ಯಾಟದ ವೀಕ್ಷಕರಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇಲ್ಲಿಯ ದೈಹಿಕ ಶಿಕ್ಷಣ ಬೋಧಕರಾದ ಪ್ರವೀಣ್ ಕುಮಾರ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಇಂಗ್ಲೀಷ್ ಭಾಷಾ ಉಪನ್ಯಾಸಕರಾದ ಸ್ರೀಮತಿ ಸುರೇಖಾ ಸ್ವಾಗತಿಸಿ, ದೈಹಿಕ ಶಿಕ್ಷಣ ಬೋಧಕರಾದ ಸತೀಶ್ ಕುಮಾರ್ ಕೆ ಆರ್ ವಂದಿಸಿದರು. ಹಿಂದಿ ಭಾಷಾ ಉಪನ್ಯಾಸಕರಾದ ರಾಮಕೃಷ್ಣ ಕೆ ಎಸ್ ಕಾರ್‍ಯಕ್ರಮ ನಿರೂಪಿಸಿದರು.