ಹಿರೇಬಂಡಾಡಿ ಈಗ ರಾಜ್ಯಮಟ್ಟದಲ್ಲಿ ಸುದ್ದಿಮಾಡುತ್ತಿದೆ | ಅಡಿಕೆ ಗಿಡ ಕಡಿಯದೆ ಊಟದ ಚಪ್ಪರ ಹಾಕಿದ್ದು ಗಮನಸೆಳೆದಿದೆ

ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದ ಸಿದ್ದಮ್ಮ ಅವರಿಗೆ ಸೇರಿದ 170 ಅಡಿಕೆ ಮರ ಮತ್ತು 25 ತೆಂಗಿನ ಮರಗಳನ್ನು ತಾಲೂಕು ಆಡಳಿತ ಏಕಾಏಕಿ ಕಡಿದುಹಾಕಿ ನಿಮಗೆ ಗೊತ್ತೇ ಇದೆ.

ಈಗ ಈ ಸುದ್ದಿಗೆ ರಿಲೇಟ್ ಆಗುವಂತೆ ನಮ್ಮ ದಕ್ಷಿಣಕನ್ನಡದ ಪುತ್ತೂರಿನ ಹಿರೇಬಂಡಾಡಿಯ ಬ್ರಹ್ಮಕಲಶದ ಸುದ್ದಿ ದೃಶ್ಯ ಮಾಧ್ಯಮ ಒಂದರಲ್ಲಿ ದೊಡ್ಡದಾಗಿ ಬಂದು ರಾಜ್ಯಾದ್ಯಂತ ಹಿರೇಬಂಡಾಡಿ ಗ್ರಾಮದ ಹೆಸರು ಕರ್ನಾಟಕದಾದ್ಯಂತ ಗುರುತಿಸುವಂತೆ ಮಾಡಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಪುತ್ತೂರಿನ ಶಾಸಕ ಶ್ರೀ ಸಂಜೀವ ಮಠಂದೂರು ಅವರ ಸ್ವಗ್ರಾಮ ಹಿರೇಬಂಡಾಡಿಯ ಉಳತ್ತೋಡಿ ಶ್ರೀ ಷಣ್ಮುಖ ದೇವಾಲಯದಲ್ಲಿ ತೀರ ಇತ್ತೀಚೆಗೆ ಬ್ರಹ್ಮ ಕಲಶ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆದಿತ್ತು. ಉಳತ್ತೋಡಿ ಷಣ್ಮುಖ ದೇವಾಲಯವು ಪೂರ್ತಿಯಾಗಿ ಅಡಿಕೆ ತೋಟಗಳಿಂದ ಆವೃತವಾಗಿದ್ದು, ಅಲ್ಲಿ ಸಭಾ ಕಾರ್ಯಕ್ರಮಕ್ಕೆ ಅಗತ್ಯವಿರುವಷ್ಟು ಸ್ಥಳಾವಕಾಶ ಮಾತ್ರ ಇತ್ತು. ದೇಗುಲದ ಅನ್ನಸಂತರ್ಪಣೆಗೆ ಬೇಕಾದ ಸ್ಥಳಾವಕಾಶಕ್ಕೆ ತೀವ್ರ ಕೊರತೆ ಇತ್ತು.

ಇಂತಹ ಸಂದರ್ಭದಲ್ಲಿ ಹಲವು ಕೋಟಿ ಬಜೆಟಿನಲ್ಲಿ ಮಾಡುವ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಗ್ರಾಮಸ್ಥರು ತೋಟವನ್ನು ಕಡಿಯದೆ, ಅಡಿಕೆ ತೋಟದ ನೆಲವನ್ನು ಶ್ರಮದಾನದ ಮೂಲಕ ಸಮತಟ್ಟು ಮಾಡಿ ಅಡಿಕೆ ಮರ ಇರುವಂತೆಯೇ ಮೇಲ್ಗಡೆ ಶಾಮಿಯಾನದ ವ್ಯವಸ್ಥೆ ಮಾಡಿ, ಇದು ಅಡಿಕೆ ತೋಟ ಅಲ್ಲವೇನೋ ಎಂಬಂತೆ ಊಟದ ಛತ್ರ ನಿರ್ಮಿಸಿದ್ದರು. ಇದೇ ವ್ಯವಸ್ಥೆಯಲ್ಲಿ 11 ದಿನಗಳು ಬಂದಿರುವ ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದ್ದರು.

ಈ ವಿಚಾರ ಕರ್ನಾಟಕದ ಪ್ರಖ್ಯಾತ ದೃಶ್ಯಮಾಧ್ಯಮ ಒಂದರಲ್ಲಿ ಬಂದಿದ್ದು, ಕೋಟ್ಯಾಂತರ ಬಜೆಟ್ಟಿನಲ್ಲಿ ನಡೆಯುವ ಮತ್ತು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ತೀರಾ ಅಗತ್ಯವಿರುವ ಸ್ಥಳಾವಕಾಶ ಸಮಸ್ಯೆ ಇದ್ದರೂ ಯಾವುದೇ ಸಂದರ್ಭದಲ್ಲೂ, ಒಂದೇ ಒಂದು ಅಡಿಕೆ ಗಿಡಕ್ಕೆ ಕೊಡಲಿ ತಾಗಿಸದೆ ಹಿರೇಬಂಡಾಡಿಯ ಜನರು ಬ್ರಹ್ಮಕಲಶೋತ್ಸವ ಮುಗಿಸಿದ್ದರು. ಅದಕ್ಕಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ, ಪುತ್ತೂರಿನ ಶಾಸಕ ಶ್ರೀ ಸಂಜೀವ ಮಠಂದೂರು ಮತ್ತವರ ತಂಡಕ್ಕೆ ಶ್ಲಾಘನೆ ಕೇಳಿಬಂದಿದೆ.

ಅಭಿವೃದ್ಧಿ ಕಾರ್ಯಗಳಲ್ಲಿ ಜಿಲ್ಲೆಗೆ ನಂಬರ್ 1 ಗ್ರಾಮವಾಗಿ ಹಿರೇಬಂಡಾಡಿ ಹೆಸರುವಾಸಿಯಾಗಿತ್ತು. ಈಗ ಪುತ್ತೂರಿನ ಹಿರೇಬಂಡಾಡಿ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿದೆ.

error: Content is protected !!
Scroll to Top
%d bloggers like this: