ಯೂರೋಪಿನಿಂದ ಎಲ್ಲಾ ಸಂಚಾರ ಬಂದ್ ಮಾಡಿದ ಡೊನಾಲ್ಡ್ ಟ್ರಂಪ್ । ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಅನ್ನು ‘ ಪಾಂಡೆಮಿಕ್ ‘ ಎಂಬ ಘೋಷಣೆ ಹಿನ್ನೆಲೆ
ಗುರುವಾರ / ಮಾ.12 : ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ WHO ವಿಶ್ವದಾದ್ಯಂತ ವೇಗವಾಗಿ ಹಬ್ಬುತ್ತಿರುವ ಕೋವಿಡ್ 19 ಅಂದರೆ ಕೋರೋನಾ ವ್ಯಾಧಿಯನ್ನು ಈಗ ‘ ಪಾಂಡೆಮಿಕ್ ‘, ಅಂದರೆ ಸಾಂಕ್ರಾಮಿಕ ಗುಣಲಕ್ಷಣಗಳನ್ನು ಹೊಂದಿದ್ದು ಒಂದು ದೇಶವಲ್ಲದೆ ಹಲವು ದೇಶಗಳಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.
ಸಾಮಾನ್ಯವಾಗಿ ‘ ಎಪಿಡೆಮಿಕ್ ‘ ಎಂದರೆ ಸಾಂಕ್ರಾಮಿಕ ರೋಗ. ಒಂದು ಊರಿನಲ್ಲಿ ಒಂದು ಪೇಟೆಯಲ್ಲಿ ಪಟ್ಟಣಗಳಲ್ಲಿ ಅಥವಾ ದೇಶದಲ್ಲಿ ಯಾವುದೋ ಒಂದು ಸಾಂಕ್ರಾಮಿಕ ರೋಗ ಹರಡುತ್ತಿದ್ದರೆ ಆಗ ಅದಕ್ಕೆ ‘ ಎಪಿಡೆಮಿಕ್ ‘ ಅನ್ನುತ್ತಾರೆ.
ನಾವು ಪ್ರತಿದಿನವೂ ಎಲ್ಲ ದೇಶಗಳನ್ನು ಈ ವ್ಯಾಧಿಯ ವಿರುದ್ಧ ತೀಕ್ಷ್ಣವಾದ ಕ್ರಮಕೈಗೊಳ್ಳಲು ಸೂಚಿಸಿದ್ದೇವೆ. ನಾವು ಅಲಾರಾಂ ನ ದೊಡ್ಡ ಗಂಟೆ ಎಲ್ಲರಿಗೂ ಕೇಳಿಸುವಂತೆ ಬಾರಿಸಿದ್ದೇವೆ.
ಎಂದು ವಿಶ್ವಸಂಸ್ಥೆಯ ಆರೋಗ್ಯಾಧಿಕಾರಿ ಟೇಡ್ರೋಸ್ ಅ ಧೋನೊಮ್ ಘೆಬ್ರೆಯೆಸ್ ಅವರು ಹೇಳಿದ್ದಾರೆ.
ವಿಶ್ವದ ಹಲವು ರಾಷ್ಟ್ರಗಳು ಅಗತ್ಯವಾಗಿ ಬೇಕಾದ ಕ್ರಮಗಳನ್ನು ಕೈಗೊಳ್ಳದೆ ಇರುವುದೇ ಈ ವ್ಯಾಧಿಯು ಇಷ್ಟು ಪ್ರಮಾಣದಲ್ಲಿ ಬೆಳೆಯಲು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.
ಅವರ ಈ ಹೇಳಿಕೆ ಬೆನ್ನಲ್ಲೇ ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರು ಯುರೋಪಿನಿಂದ ಯುಎಸ್ಎ ಗೆ ಬರುವ ಎಲ್ಲಾ ಸಂಚಾರವನ್ನು ಇನ್ನೂ ಮೂವತ್ತು ದಿನಗಳ ಕಾಲ ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ. ಇದು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಯುರೋಪ್ ರಾಷ್ಟ್ರಗಳಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ವ್ಯಾಧಿಯನ್ನು ನಿಯಂತ್ರಿಸಲು ಈ ರಾಷ್ಟ್ರಗಳು ವಿಫಲವಾದ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರಕ್ಕೆ ಅಮೆರಿಕದ ಪ್ರಸಿಡೆಂಟ್ ಅವರು ಬಂದಿದ್ದಾರೆ. ಯುರೋಪಿಗೆ ಚೀನಾದಿಂದ ಬರುವ ಪ್ರವಾಸಿಗರನ್ನು ಪಡೆಯುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಯುರೋಪ್ ವಿಫಲವಾದ ಕಾರಣ ಈ ಮಹತ್ವದ ನಿರ್ಧಾರವನ್ನು ಟ್ರಂಪ್ ಅವರು ತೆಗೆದು ಕೊಂಡಿದ್ದಾರೆ.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ
ಈ ನಮ್ಮ ನಿರ್ಧಾರದಿಂದ ನಮ್ಮ ವಾಣಿಜ್ಯ ಚಟುವಟಿಕೆಗಳಿಗೆ ಹಾನಿಯುಂಟಾಗುತ್ತದೆ ಆದರೂ ಇದು ಇಂದಿನ ಅಗತ್ಯ-” ಕಠಿಣ ಆದರೆ ಅತ್ಯಗತ್ಯ”
– ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ವಿಶ್ವದಲ್ಲಿ ಒಂದು ಗ್ರೇಟೆಸ್ಟ್ ದೇಶ. ನಮ್ಮಲ್ಲಿ ಉತ್ಕೃಷ್ಟ ಮಟ್ಟದ ವಿಜ್ಞಾನಿಗಳಿದ್ದಾರೆ.ಡಾಕ್ಟರ್ ಗಳಿದ್ದಾರೆ. ನರ್ಸ್ಗಳಿದ್ದಾರೆ ಮತ್ತು ಇತರ ಹೆಲ್ತ್ ಕೇರ್ ಪ್ರೊಫೆಷನಲ್ಸ್ ಇದ್ದಾರೆ. ಅವರ ನೆರವಿನಿಂದ ನಾವು ಈ ವ್ಯಾಧಿಯನ್ನು ತಡೆಯಲು, ನಿಯಂತ್ರಿಸಲು ಮತ್ತು ಇದಕ್ಕೆ ವ್ಯಾಕ್ಸಿನ್ ಕಂಡು ಹುಡುಕುತ್ತೇವೆಂದು ಹೇಳಿದ್ದಾರೆ. ಕೋರೋನಾ ವೈರಸ್ ಅನ್ನು ಪತ್ತೆ ಮಾಡಲು ಚಿಕಿತ್ಸೆ ನೀಡಲು ಮತ್ತು ತಡೆಯಲು ಬೇಕಾದ ಅಗತ್ಯವಿರುವ ಪಾಲಿಸಿ ಮಾಡಲು ನಾವು ಹೆಜ್ಜೆ ಇಟ್ಟಿದ್ದೇವೆ.
ಯುರೋಪಿನಲ್ಲಿ ಒಟ್ಟು 44 ದೇಶಗಳಿವೆ. ಆದರೆ ಈ ನಿರ್ಧಾರ ಅಮೇರಿಕಾದ ಸಾರ್ವಕಾಲಿಕ ಬೆಸ್ಟ್ ಫ್ರೆಂಡ್ ಯುಕೆಗೆ ( ಇಂಗ್ಲೆಂಡ್ ) ಅನ್ವಯಿಸುವುದಿಲ್ಲ ; ಅಲ್ಲಿ 460 ಕ್ಕೂ ಹೆಚ್ಚು ಮಂದಿ ಕೋವಿಡ್ 19 ರೋಗಸ್ಥರು ಈಗಾಗಲೇ ಪತ್ತೆಯಾಗಿದ್ದರೂ.