ಪುತ್ತೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ

ಪುತ್ತೂರು: ರಾಜ್ಯದ 58 ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಪ್ರಕಟಿಸಿ ರಾಜ್ಯ ಸರಕಾರ ಬುಧವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ಪುತ್ತೂರು ನಗರ ಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂಗಡದವರಿಗೆ ಮೀಸಲಾತಿ ನೀಡಿ ಅಧಿಸೂಚನೆ ಪ್ರಕಟವಾಗಿದೆ.

ಪುತ್ತೂರು ನಗರಸಭಾ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್ 5 ಮತ್ತು ಎಸ್.ಡಿ.ಪಿ.ಐ. ಒಂದು ಸ್ಥಾನ ಪಡೆದುಕೊಂಡಿದೆ.

ಬಿಜೆಪಿಯ ಶಿವರಾಮ ಎಸ್. ಕಬಕ, ವಸಂತ ಕಾರೆಕ್ಕಾಡು ಕಬಕ, ಜೀವಂಧರ ಜೈನ್ ಪಡ್ನೂರು, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಕೃಷ್ಣನಗರ, ಸುಂದರ ಪೂಜಾರಿ ಬಡಾವು, ಪ್ರೇಮ್ ಕುಮಾರ್, ಪದ್ಮನಾಭ ನಾಯ್ಕ, ಪಿ.ಜಿ.ಜಗನ್ನೀವಾಸ ರಾವ್, ಪ್ರೇಮಲತ ನಂದಿಲ, ಸಂತೋಷ್ ಕುಮಾರ್, ನವೀನ್ ಕುಮಾರ್, ಭಾಮಿ ಅಶೋಕ್‌ ಶೆಣೈ, ಯಶೋದ ಹರೀಶ್, ವಿದ್ಯಾ ಗೌರಿ, ದೀಕ್ಷ ಪೈ, ಇಂದಿರಾ ಪುರುಷೋತ್ತಮ, ಶಶಿಕಲ ಸಿ.ಎಸ್, ಮನೋಹರ ಕಲ್ಲಾರೆ, ಬಾಲಚಂದ್ರ ಕೆ, ರೋಹಿಣಿ ಕೇಶವ ಪೂಜಾರಿ, ಮಮತ ರಂಜನ್, ಶೀನಪ್ಪ ನಾಯ್ಕ, ಪೂರ್ಣಿಮಾ ಚೆನ್ನಪ್ಪ ಗೌಡ, ಕಾಂಗ್ರೆಸ್ಸಿನ ರೋಬಿನ್ ತಾವ್ರೋ, ಶಕ್ತಿಸಿನ್ಹಾ, ಶೈಲಾ ಪೈ, ಯೂಸುಫ್ ಡ್ರೀಮ್, ಮಹಮ್ಮದ್ ರಿಯಾಝ್ ಮತ್ತು ಎಸ್.ಡಿ.ಪಿ.ಐ ಯ ಫಾತಿಮತ್ ಝೊರಾ ಜಯಗಳಿಸಿದ್ದಾರೆ.

ಇದರಲ್ಲಿ ಬಹುಮತ ಪಡೆದುಕೊಂಡಿರುವ ಬಿಜೆಪಿಯ ಅಭ್ಯರ್ಥಿಗಳು ಕ್ರಮವಾಗಿ ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆ ಅಲಂಕರಿಸಲಿದ್ದಾರೆ.

Leave A Reply

Your email address will not be published.