ವಿಟ್ಲ | ಮುಳಿಯದಲ್ಲಿ ವಿವಾಹಿತ ಮಹಿಳೆ ಬಾವಿಗೆ ಕಾಲು ಜಾರಿ ಬಿದ್ದು ಮೃತ್ಯು

ವಿಟ್ಲ : ವಿವಾಹಿತ ಮಧ್ಯವಯಸ್ಕ ಮಹಿಳೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲದ ಅಳಿಕೆ ಗ್ರಾಮದ ಮುಳಿಯದಲ್ಲಿ ಮಾ.11 ರಂದು ಈ ಘಟನೆ ನಡೆದಿದ್ದು, ಮೃತ ಮಹಿಳೆ ಸುಶೀಲ (50 ವ.) ಅವರು ಮುಳಿಯ ನಿವಾಸಿ ನಾರಾಯಣ ಮೂಲ್ಯರವರ ಪತ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಮೃತ ಸುಶೀಲಾರವರು ನಿನ್ನೆ, ಮಾ.11 ರ ಬೆಳಗ್ಗೆ ಎಂದಿನಂತೆ ಎದ್ದು ದೈನಂದಿನ ಮನೆ ಕಾರ್ಯಗಳಲ್ಲಿ ನಿರತರಾಗಿದ್ದರು. ಹಾಗೆ ಗೃಹಕೃತ್ಯಗಳನ್ನು ಮಾಡುತ್ತಲೇ ಒಮ್ಮಿಂದೊಮ್ಮೆಗೆ ಕಣ್ಮರೆಯಾಗಿ ಹೋಗಿದ್ದರು. ಅವರು ತುಂಬಾ ಹೊತ್ತು ಮನೆಯ ಪರಿಸರದಲ್ಲಿ ಕಾಣಿಸದೆ ಹೋದಾಗ ಮನೆಯವರು ಅಕ್ಕಪಕ್ಕದ ಮನೆಯವರ ಜೊತೆ ವಿಚಾರಿಸಿದರು. ಆಗಲೂ ಸುಶೀಲಾ ರವರು ಕಂಡು ಬರದೇ ಇದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಟ ಶುರು ಮಾಡಿದರು. ಆಗ ಮನೆಯ ಪಕ್ಕದಲ್ಲೇ ಇರುವ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೃತ ಸುಶೀಲಾರವರ ಸಹೋದರರಾದ, ಮಂಜೇಶ್ವರ ತಾಲೂಕಿನ ಜೋಗಿತ್ತೋಡಿ ನಾರಾಯಣರವರು ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರು ನೀಡಿದ ಲಿಖಿತ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top
%d bloggers like this: