ಕೆಲಂಬೀರಿಯಲ್ಲಿ 45ನೇ ವರ್ಷದ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ
ಕಾಣಿಯೂರು: ಕುದ್ಮಾರು ಗ್ರಾಮದ ಕೆಲಂಬೀರಿ ಗರಡಿಯಲ್ಲಿ 45ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವವು ಮಾ 10ರಂದು ನಡೆಯಿತು. ಮಾ 8ರಂದು ಸಾರ್ವಜನಿಕ ಆಟೋಟ ಸ್ಪರ್ಧೆಗಳು ನಡೆದವು. ಮಾ 9ರಂದು ಬೆಳಿಗ್ಗೆ ಸ್ಥಳ ಶುದ್ಧಿ ಹೋಮ, ಶ್ರೀ ನಾಗಬ್ರಹ್ಮ ತಂಬಿಲ, ಅಪರಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಶ್ರೀ ಕೋಡಮಂತಾಯ ದೈವದ ಭಂಡಾರ ತೆಗೆಯುವುದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಮಾ 10ರಂದು ಬೆಳಿಗ್ಗೆ ಕೊಡಮಂತಾಯ ದೈವದ ನೇಮೋತ್ಸವ, ಹರಿಕೆ ಮತ್ತು ಬಟ್ಟಲು ಕಾಣಿಕೆ, ಗಂಧ ಪ್ರಸಾದ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಶ್ರೀ ಬ್ರಹ್ಮಬೈದೆರುಗಳ ಭಂಡಾರ ತೆಗೆಯುವುದು, ರಾತ್ರಿ ಗಂಧಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಬ್ರಹ್ಮ ಬೈದೆರುಗಳ ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಮಾಣಿಬಾಲೆ ಗರಡಿ ಇಳಿಯುವುದು, ಬೈದೆರುಗಳ ಪಾತ್ರಿಗಳ ಸೇಠ್ ನಡೆಯಿತು.
ರಾತ್ರಿ ನಡೆದ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಗೆಜ್ಜೆಗಿರಿ ಶ್ರೀ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ಉದ್ಘಾಟಿಸಿದರು.
ಕೆಲಂಬೀರಿ ಶ್ರೀ ಬ್ರಹ್ಮಬೈದೆರುಗಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷರಾದ ಉಮೇಶ್ ಕೆ.ಎನ್. ಕಾರ್ಲಾಡಿ ಇವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಗೋಕರ್ಣನಾಥೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕ ವಿಜಯಕುಮಾರ್ ಸೊರಕೆ ಸನ್ಮಾನಿಸಿದರು.
ಪುತ್ತೂರು ಪಶು ವೈದ್ಯಾಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ಧರ್ಮಪಾಲ ಕರಂದ್ಲಾಜೆ ಬಹುಮಾನ ವಿತರಿಸಿದರು.
ಶ್ರೀ ಕ್ಷೇತ್ರ ಗೆಜ್ಜಿಗಿರಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ ಅತಿಥಿಗಳಾಗಿ ಭಾಗವಹಿಸಲಿದ್ದರು,ಬೇಬಿ ಆರಾಧ್ಯ ಜನಾರ್ದನ ಎರ್ಮೆತ್ತಿಮಾರು ಇವರಿಗೆ ಸನ್ಮಾನ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ರಾತ್ರಿ ನಮ್ಮ ಟಿವಿ ಬಲೆ ತೆಲಿಪಾ ಸೀಸನ್ 7 ಖ್ಯಾತಿಯ ಕಲಾವಿದರ ಅಭಿನಯದಲ್ಲಿ ಸಾಯಿ ಶ್ರಂಗಾರ ಪುತ್ತೂರು ಅರ್ಪಿಸುವ ಮಕ್ಕರ್ ತಂಡದಿಂದ ನಾನ್ ಸ್ಟಾಪ್ ಕಾಮಿಡಿ ಕಾರ್ಯಕ್ರಮ ನಡೆಯಿತು. ಮಾ 11ರಂದು ಬೆಳಿಗ್ಗೆ ಬೈದೆರುಗಳ ಸೇಠ್, ಹರಿಕೆ ಮತ್ತು ಗಂಧ ಪ್ರಸಾದ ವಿತರಣೆ ನಡೆಯಿತು.