Kadaba: ಮರಬಿದ್ದು ವ್ಯಕ್ತಿ ಸಾವು ಪ್ರಕರಣ; ಸ್ಥಳದಿಂದ ಕದಲದೇ ಕುಳಿತ ಕೋಳಿ!

Share the Article

Kadaba: ಕೋಡಿಂಬಾಳ ಸಮೀಪದ ಪುಳಿಕುಕ್ಕು ಮುರಚೆಡವು ಬಲಿ ನಡೆದ ಮರ ಬಿದ್ದು ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಿತ್ರ ಘಟನೆಯೊಂದು ನಡೆದಿದೆ. ಸಾವು ನಡೆದು ಎರಡು ದಿನ ಕಳೆದರೂ ಮೃತ ಸೀತಾರಾಮ ಗೌಡ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಮಾತ್ರ ಸ್ಥಳ ಬಿಟ್ಟು ಕದಲದೇ ಅಲ್ಲೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ದೀಪಾವಳಿ ಪ್ರಯುಕ್ತ ಎಡಮಂಗಲದ ತನ್ನ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗೆಂದು ಕೋಡಿಂಬಾಳದಿಂದ ಕೋಳಿ ತೆಗೆದುಕೊಂಡು ಸ್ಕೂಟಿಯಲ್ಲಿ ಸೀತಾರಾಮ ಅವರು ಎಡಮಂಗಲದತ್ತ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತ ಪಕ್ಕ ಇದ್ದ ದೂಪದ ಮರ ತಲೆಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಈ ಘಟನೆ ನ.2 ರಂದು ನಡೆದಿದೆ.

ಸ್ಕೂಟಿಯಲ್ಲಿ ಕೋಳಿಯ ಕಾಲನ್ನು ಹಗ್ಗದಿಂದ ಕಟ್ಟಿದ್ದರಿಂದ ಅದು ಮೃತದೇಹದ ಬಳಿಯೇ ಇತ್ತು. ನಂತರ ಸ್ಥಳದಲ್ಲಿದ್ದವರು ಬಂದು ಕೋಳಿಯ ಕಾಲಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಿ ಬಿಟ್ಟಿದ್ದರು. ನಂತರ ಕೋಳಿ ಹತ್ತಿರ ಇರುವ ಕಾಡಿನೊಳಗೆ ಹೋಗಿತ್ತು. ನಂತರ ಜನರೆಲ್ಲ ಹೋದ ನಂತರ ಮತ್ತೆ ಸ್ಕೂಟಿ ಬಳಿ ನಂದು ಕುಳಿತು ಬಿಟ್ಟಿದೆ. ಜನರು ಹತ್ತಿರ ಬಂದಾಗ ಪಕ್ಕದ ಮರದ ರೆಂಬೆಯ ಮೇಲೆ ಆಶ್ರಯ ಪಡೆಯುತ್ತಿದ್ದ ಕೋಳಿ ಕಳೆದ ಎರಡು ದಿನದಿಂದ ಆ ದುರ್ಘಟನೆ ನಡೆದ ಸ್ಥಳದಿಂದ ಕದಲದೇ ಇರುವುದು ನೋಡಿ ನಿಜಕ್ಕೂ ಜನರು ಆಶ್ಚರ್ಯ ಪಟ್ಟಿದ್ದಾರೆ.

Leave A Reply

Your email address will not be published.