ಕೆಲಂಬೀರಿ ಶ್ರೀ ಕೋಟಿ- ಚೆನ್ನಯ ಯುವ ಸಮಿತಿಯಿಂದ ಆಟೋಟ ಸ್ಪರ್ಧೆ

ಕಾಣಿಯೂರು: ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕ ವೃದ್ಧಿಯಾಗುತ್ತದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಇರುವಂತದು ಸ್ವಾಭಾವಿಕ. ನಿತ್ಯ ಶ್ರಮ ಪಟ್ಟರೆ ಮಾತ್ರ ನಮಗೆ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ. ಉತ್ತಮ ಕ್ರೀಡಾಪಟುವಾಗಲು ಕಠಿಣ ಅಭ್ಯಾಸ ಅಗತ್ಯ. ಶ್ರದ್ಧೆ, ಏಕಾಗ್ರತೆಯಿಂದ ಪ್ರಯತ್ನಿಸಿದಾಗ ಕ್ರೀಡಾ ಸಾಧನೆ ಸಾಧ್ಯ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುದ್ಮಾರು ಗ್ರಾಮ ಸಮಿತಿ ಅಧ್ಯಕ್ಷ ಲೋಕನಾಥ ಗೌಡ ವಜ್ರಗಿರಿ ಹೇಳಿದರು.

 

ಅವರು ಕೆಲಂಬೀರಿ ಶ್ರೀ ಕೋಟಿ- ಚೆನ್ನಯ ಯುವ ಸಮಿತಿ, ಶ್ರೀ ಬ್ರಹ್ಮ ಬೈದೆರುಗಳ ಗರಡಿ ಕೆಲಂಬೀರಿ ಇದರ ವತಿಯಿಂದ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವದ ಪ್ರಯುಕ್ತ ಮಾ 8ರಂದು ನಡೆದ ಆಟೋಟ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ಕೋಟಿ- ಚೆನ್ನಯ ಯುವ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಬಿ.ಎಸ್. ಬರಮೇಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕ್ರೀಡೆಗಳು, ಕ್ರೀಡಾಕೂಟಗಳು ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ, ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವುದು ಶ್ಲಾಘನೀಯ ಎಂದರು.

ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿಯ ಮೊಕ್ತೇಸರರಾದ ಬಾಬು ಪೂಜಾರಿ, ಶ್ರೀಧರ ಸಾಲಿಯಾನ್ ಕೆಲಂಬೀರಿ, ಕೆಲಂಬೀರಿ ಗರಡಿಯ ಕೋಟಿ ಚೆನ್ನಯ ಕರಸೇವಾ ಸಮಿತಿ ಅಧ್ಯಕ್ಷ ಚೇತನ್ ಪಾಲೆತ್ತಡಿ ಉಪಸ್ಥಿತರಿದ್ದರು.

ಸಚಿನ್ ಸೌತೆಮಾರ್, ರಾಜೇಶ್ ಕೆಲಂಬೀರಿ, ಶ್ರೀಸನ್ ಎರ್ಮೆತ್ತಿಮಾರು, ಉದಯಕುಮಾರ್ ಸೀಗೆತ್ತಡಿ ಅತಿಥಿಗಳನ್ನು ಗೌರವಿಸಿದರು.

ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿಯ ಆಡಳಿತ ಸಮಿತಿ ಕಾರ್ಯದರ್ಶಿ ಸದಾನಂದ ಎಸ್. ಸೌತೆಮಾರು ಸ್ವಾಗತಿಸಿ, ಜತೆ ಕಾರ್ಯದರ್ಶಿ ರಮೇಶ್ ಕೆ.ಎನ್ ಕಾರ್ಲಾಡಿ ಕಾರ್ಯಕ್ರಮ ನಿರೂಪಿಸಿದರು. ಉದಯಕುಮಾರ್ ಸೀಗೆತ್ತಡಿ ವಂದಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

Leave A Reply

Your email address will not be published.