ಸುಳ್ಯದ ಓಡಬಾಯಿ ರಸ್ತೆ ಅಪಘಾತದ ಗಾಯಾಳು ಶಾಂತಿನಗರ ನಿವಾಸಿ ಲತೀಶ್ ಮೃತ್ಯು

0 8

ಸುಳ್ಯದ ಒಡಬಾಯಿಯಲ್ಲಿ ಟೆಂಪೊ ರಿಕ್ಷಾ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದ. ಆದರೆ ಈಗ ಚಿಕಿತ್ಸೆ ಫಲಿಸದೆ ಆತ ಮೃತನಾಗಿದ್ದಾನೆ.

ಘಟನೆಯ ವಿವರ

ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾದ ಕಾರಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಾಂತಿನಗರ ನಿವಾಸಿ ಜಯರಾಮ ಮೇಸ್ತ್ರಿ ಯವರ ಪುತ್ರ ಲತೀಶ್ ಎಂಬ ಯುವಕ ತನ್ನ ಪಲ್ಸರ್ ಬೈಕಿನಲ್ಲಿ ಮಾ.7 ರಂದು ರಾತ್ರಿ ಸುಮಾರು 12.30 ಗಂಟೆಗೆ ಸುಳ್ಯ ಕಡೆಗೆ ಹೋಗುತ್ತಿದ್ದ. ಆಗ ಸುಳ್ಯದಿಂದ ಮಂಗಳೂರಿನತ್ತ ಹೋಗುತ್ತಿದ್ದ ಟೆಂಪೊ ರಿಕ್ಷಾಕ್ಕೆ ಒಡಬಾಯಿಯ ಹತ್ತಿರ ಇರುವ ಪೆಟ್ರೋಲ್ ಬಂಕ್ ಬಳಿ ಬೈಕ್ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಪರಿಣಾಮ ಲತೀಶ್ ಅವರು ಬೈಕ್ ಸವಾರ ಲತೀಶ್ ರವರು ರಸ್ತೆಗೆ ಎಸೆಯಲ್ಪಟ್ಟರು. ಅದ ಸಂದರ್ಭದಲ್ಲಿ ಲತೀಷ್ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡು ಆತ ಹೊರಳಿಕೊಂಡಿದ್ದರು. ಮಧ್ಯರಾತ್ರಿ ಆದುದರಿಂದ ಜನ ಸಂಚಾರ ವಿರಳವಾಗಿತ್ತು. ಆನಂತರ ಆತನನ್ನು ಗಮನಿಸಿದ ಸ್ಥಳೀಯ ಯುವಕರು ಅಟೋದಲ್ಲಿ ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು.

ಆದರೆ ತಲೆಗೆ ಆದ ಗಾಯಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ (ಮಾ.8 ರಂದು) ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

https://hosakannada.com/2020/03/08/happy-womans-day/
Leave A Reply