ಸವಣೂರು| ಮುಗೇರು ದೇವಳದ ಜಾತ್ರೆಯ ಆಮಂತ್ರಣ ಬಿಡುಗಡೆ

ಸವಣೂರು: ಮಾರ್ಚ್ 25,26,ರಂದು ನಡೆಯಲಿರುವ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 6 ನೇ ವರ್ಷದ ಪ್ರತಿಷ್ಟಾ ಜಾತ್ರೋತ್ಸವದ ಆಮಂತ್ರಣ ಪತ್ರವನ್ನು ದೇವರ ಸನ್ನಿಧಿಯಲ್ಲಿರಿಸಿ ಪ್ರಾರ್ಥನೆ ಮಾಡಿ ಬಿಡುಗಡೆಗೊಳಿಸಿ ವಿತರಣೆಗೆ ಚಾಲನೆ ನೀಡಲಾಯಿತು.

 

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಸದಸ್ಯರು ಗಳಾದ ಶಿವಪ್ರಸಾದ್ ಶೆಟ್ಟಿ, ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ಮೋನಪ್ಪ ಗೌಡ ಆರೇಲ್ತಡಿ, ರಾಕೇಶ್ ರೈ ಕೆಡೆಂಜಿ, ಶ್ರೀಮತಿ ಪ್ರೇಮ ಪುಟ್ಟಣ್ಣ ನಾಯ್ಕ, ಅರ್ಚಕರಾದ ಶ್ರೀ ಪದ್ಮನಾಭ ಕುಂಜತ್ತಾಯ ಭಕ್ತಾದಿಗಳು ಶ್ರೀಮತಿ ವಿಜಯಈಶ್ವರ ಗೌಡ,ಶ್ರೀಮತಿ ಪದ್ಮಾವತಿ ಮಡಕೆ,ಹರೀಶ್ಚಂದ್ರ ಗೌಡ ಕಾಯರ್ಗ, ಸಂಜೀವ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು

Leave A Reply

Your email address will not be published.