ಮಂಗಳೂರು ಗೋಲಿಬಾರ್ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನು ರದ್ದು : ಸಿಐಜೆ ನೇತೃತ್ವದ ಪೀಠದಿಂದ ಮಹತ್ವದ ತೀರ್ಪು
ಮಂಗಳೂರು ಗೋಲಿಬಾರ್ ಪ್ರಕರಣದ ಎಲ್ಲಾ 22 ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟಿಸುವ ಸಮಯದಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿ ಗುಂಪೊಂದು ಪೊಲೀಸ್ ಠಾಣೆಯನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು. ಈ ಸಂದರ್ಭ ಪೊಲೀಸರು ಸಿಡಿಸಿದ ಗುಂಡಿಗೆ ಬಲಿಯಾಗಿದ್ದರು.
ಹಿಂಸಾಚಾರಕ್ಕೆ ಕಾರಣರಾದ 22 ಜನರನ್ನು ಗುರುತಿಸಿ ಪೊಲೀಸರು ಕೇಸು ದಾಖಲಿಸಿ ಜೈಲಿಗಟ್ಟಿದ್ದರು. ಆದರೆ ಇತ್ತೀಚೆಗಷ್ಟೇ ಹೈಕೋರ್ಟ್ ಮಧ್ಯಪ್ರವೇಶಿಸಿ ಹಿಂಸಾಚಾರ ನಡೆಸಿದ ಆಪಾದಿತರಿಗೆಗಳಿಗೆ ಜಾಮೀನು ಜಾರಿಗೊಳಿಸಿತ್ತು.
ಹೈಕೋರ್ಟ್ ನ ಈ ನಿರ್ಧಾರದ ವಿರುದ್ಧ ಕರ್ನಾಟಕ ಸರಕಾರವು ಸುಪ್ರೀಂ ಕೋರ್ಟಿಗೆ ಅಪೀಲು ಹೋಗಿತ್ತು.
ಈಗ ಸುಪ್ರೀಂಕೋರ್ಟ್ ನ ಚೀಫ್ ಜಸ್ಟಿಸ್ ಆಫ್ ಇಂಡಿಯಾ ನೇತೃತ್ವದ ಪೀಠವು ಜಾಮೀನನ್ನು ರದ್ದು ಪಡಿಸುವ ಮೂಲಕ ಈ 22 ಜನ ಗಲಭೆಕೋರರಿಗೆ ಅಂತಿಮ ತನಿಖೆ ಮುಗಿಯುವವರೆಗೆ ನೆಗ್ಗಿ ಹೋದ ಅಲ್ಯುಮಿನಿಯಂ ತಟ್ಟೆಯಲ್ಲಿ ಜೈಲೂಟ ಗ್ಯಾರಂಟಿ.