ಮಾ.7 | ಬೆಟ್ಟಂಪಾಡಿ ಕಾಲೇಜಿನಲ್ಲಿದಕ್ಷಿಣ ಕನ್ನಡ ಮತ್ತು ಕೊಡಗು -ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು | ರಾಷ್ಟ್ರೀಯ ವಿಚಾರ ಸಂಕಿರಣ

ಬೆಟ್ಟಂಪಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬೆಟ್ಟಂಪಾಡಿ ಇವುಗಳ ಜಂಟಿ ಆಶ್ರಯದಲ್ಲಿ ಮಾ7.ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ಬೆಟ್ಟಂಪಾಡಿ ಕಾಲೇಜಿನಲ್ಲಿ ನಡೆಯಲಿದೆ.

ಸಂಕಿರಣವನ್ನು ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಉದ್ಘಾಟಿಸಲಿದ್ದು, ಗೋವಾ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವರಾದ ಡಾ. ಶ್ಯಾಮ್ ಭಟ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಗೋಷ್ಠಿಗಳಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಸಾಂಸ್ಕೃತಿಕ ಸಂಬಂಧಗಳ ವಿಚಾರವಾಗಿ ಕಾಸರಗೋಡಿನ ಡಾ. ರತ್ನಾಕರ ಮಲ್ಲಮೂಲೆ, ಐತಿಹಾಸಿಕ ಸಂಬಂಧಗಳ ಕುರಿತಾಗಿ ಮಂಗಳೂರಿನ ಡಾ. ಮೀನಾಕ್ಷಿ ಎಂ.ಎಂ., ವಸಾಹತುಶಾಹಿ ಕಾಲದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗಿನ ಸಂಬಂಧಗಳ ಕುರಿತಾಗಿ ಕೊಡಗಿನ ಡಾ. ಕೆ.ಎಂ. ಲೋಕೇಶ್, ಜನಪದ ಆಚರಣೆಯ ಹಿನ್ನೆಲೆಯಲ್ಲಿಸ ಸಂಬಂಧಗಳ ಬಗ್ಗೆ ಸುಳ್ಯದ ಡಾ. ಸುಂದರ ಕೇನಾಜೆ ಮುಂತಾದವರು ವಿಚಾರಗಳನ್ನು ಮಂಡಿಸಲಿದ್ದಾರೆ.

ಅಪರಾಹ್ನ ನಡೆಯುವ ಮೂರನೆಯ ಗೋಷ್ಠಿಯಲ್ಲಿ ವಿವಿಧ ಕಾಲೇಜುಗಳ ಪ್ರಾಧ್ಯಾಪಕರುಗಳಾದ ಡಾ. ಸತೀಶ ಗಟ್ಟಿ, ಡಾ. ಅವಿನಾಶ್, ಶ್ರೀಮತಿ ವಿದ್ಯಾ ಎಸ್, ಗೋವಿಂದರಾಜ ಶರ್ಮ, ವೆಂಕಟೇಶ್, ಎಂ. ಜಿ. ಪ್ರಮೋದ್ ಮುಂತಾದವರು ವಿವಿಧ ವಿಷಯಗಳ ಮೇಲೆ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಸಂಜೆ ಪೆರ್ಲದ ನಾಲಂದ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಘ್ನೇಶ್ವರ ವರ್ಮುಡಿ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಕಾಲೇಜುಗಳ ಮಾನವಿಕ ವಿಭಾಗಗಳ ಉಪನ್ಯಾಸಕರುಗಳೂ ಆಯ್ದ ವಿದ್ಯಾರ್ಥಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವರದರಾಜ ಚಂದ್ರಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.