ಜನರ ನಡುವೆ ಮಗಳ ಮದುವೆ ನಡೆಸಿದ ತೃಪ್ತಿ- ಈವರೆಗೆ 50 ಸಾವಿರ ಮದುವೆ ಮಾಡಿಸಿದ ರಾಮುಲು ಹೇಳಿಕೆ

ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ಅವರ ಪುತ್ರಿ ರಕ್ಷಿತಾ ಅವರ ವಿವಾಹ ಸಮಾರಂಭ ಅರಮನೆ ಮೈದಾನದ ಆವರಣದಲ್ಲಿ ಅದ್ದೂರಿ ಸೆಟ್‌ ‌ನಲ್ಲಿ ನಡೆದಿದೆ.ಲಲಿತ್ ಸಂಜೀವ್ ರೆಡ್ಡಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆ ಸಮಾರಂಭದ ವೇಳೆ ಮಾತಾನಾಡಿದ ಸಚಿವ ಶ್ರೀ ಬಿ.ರಾಮುಲು, ಈ ಸಮಾರಂಭಕ್ಕೆ ರಾಜ್ಯದಲ್ಲಿರುವ ನನ್ನ ಆಪ್ತರು ಬಂಧುಗಳು ಶುಭ ಹಾರೈಸಿ ಆಶೀರ್ವಾದ ಮಾಡಿದ್ದಾರೆ. ಮಗಳ ಮದುವೆಯನ್ನು ಜನರ ನಡುವೆ ಮಾಡಬೇಕು ಎನ್ನುವ ಆಸೆ ಇತ್ತು. ಅದರಂತೆ ಇಂದು ನನ್ನ ಬಂಧುಗಳ ಮಧ್ಯೆಯೇ ವಿವಾಹ ನೆರವೇರಿದೆ ಎಂದರು.

ಶ್ರೀ ರಾಮುಲು ಎಂತಹ ವ್ಯಕ್ತಿ ಎನ್ನುವುದು ಜನರಿಗೆ ಗೊತ್ತು. ಸಾಕಷ್ಟು ವರ್ಷಗಳಿಂದ ರೈತರಿಗಾಗಿ ಹಲವು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದರು.

ಪುತ್ರಿಯ ಅದ್ದೂರಿ ವಿವಾಹದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ರಾಮುಲು, ವಿವಿದೆಡೆ ಸುಮಾರು 50 ಸಾವಿರ ಮದುವೆ ಮಾಡಿಸಿದ್ದೇನೆ. ಜನರ ಬಳಿಗೆ ಹೋಗಿ ಕೇಳಿ ಮದುವೆ ಮಾಡಿಸಿದ್ದೇನೆ.

ಅವರೆಲ್ಲರ ಆಶೀರ್ವಾದವು ಇಂದು ನನ್ನ ಮಗಳಿಗೆ ಹಾಗೂ ಕುಟುಂಬಕ್ಕೆ ಸಿಕ್ಕಿದೆ,ನನ್ನ ಸ್ವಂತ ಮಗಳ ಮದುವೆ ರೀತಿಯೇ ಬಡವರ ಮದುವೆಗಳನ್ನು ಮಾಡಿಸಿದ್ದೇನೆ.

ನನಗೆ ಅಂತಹ ಶಕ್ತಿಯನ್ನು ದೇವರು ನೀಡಿದ್ದಾನೆ. ಗದಗ ಬಳ್ಳಾರಿ ಜಿಲ್ಲೆಗಳಲ್ಲಿ ಇದೇ ರೀತಿ ಅನೇಕ ಮದುವೆಗಳನ್ನು ಮಾಡಿಸಿದ್ದೇನೆ ಎಂದರು.ಮಾಜಿ ಸಚಿವ ಜನಾರ್ಧನ ರೆಡ್ಡಿ ಜತೆಗಿದ್ದರು.

Leave A Reply

Your email address will not be published.