ಇಂದು ಮರೀಲು ಪಂಚಮುಖಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ಪುತ್ತೂರು : ಮರೀಲು ಶ್ರೀ ಪಂಚಮುಖಿ‌ ಗಾಯತ್ರೀ, ಗಣಪತಿ, ಆಂಜನೇಯ ಕ್ಷೇತ್ರದಲ್ಲಿ ಮಾ.5 ರಂದು ಪ್ರತಿಷ್ಠಾ ವರ್ಧಂತ್ಯುತ್ಸವ ನಡೆಯಲಿದೆ.


Ad Widget

ಬೆಳಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಕಲಶಾಭಿಷೇಕ, ಪಂಚಮುಖಿ ಗಣಪತಿ ಯಜ್ಞ, ಪಂಚಮುಖಿ ಆಂಜನೇಯ ‌ಯಜ್ಞ, ಸಗ್ರಹಮಖಪೂರ್ವಕ‌ ಶನೈಶ್ವರ ಯಜ್ಞ ನಡೆಯಲಿದೆ. ಮಧ್ಯಾಹ್ನ ಪಂಚಮುಖಿ ‌ಗಾಯತ್ರೀ‌ ಮಹಾಯಜ್ಞ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ‌ ನಡೆಯಲಿದೆ.

ರಾತ್ರಿ ಶ್ರೀ ದೇವರಿಗೆ‌ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.


Ad Widget

ಸಾಂಸ್ಕೃತಿಕ ವೇದಿಕೆಯಲ್ಲಿ ‌ಸಂಜೆ ಪುತ್ತೂರು ವಜ್ರಮಾತಾ ಮಹಿಳಾ ಭಜನ‌ ತಂಡ ಇವರಿಂದ ಭಜನೆ, ಜಾದೂಗಾರ್ ಶ್ಯಾಮ್ ‌ಮತ್ತು‌ ಬಳಗದಿಂದ ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ ತೆಂಕುತಿಟ್ಟು ಮತ್ತು ‌ಬಡಗತಿಟ್ಟು ಕಲಾವಿದರಿಂದ ಲವ- ಕುಶ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ನರಸಿಂಹ ಶಾಸ್ತ್ರೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Ad Widget
error: Content is protected !!
Scroll to Top
%d bloggers like this: