ಸರ್ವೆ | ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಮುಸುಕುಧಾರಿ ಗಳಿಂದ ಹಲ್ಲೆ

ಪುತ್ತೂರು: ನಗರದ ಹೊರವಲಯದ ಸರ್ವೆ ಎಂಬಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತನ ಮೇಲೆ ಮುಸುಕುದಾರಿಗಳು ಹಲ್ಲೆ ನಡೆಸಿದ ಕುರಿತು ವರದಿಯಾಗಿದೆ.

ಸರ್ವೆ ಗ್ರಾಮದಲ್ಲಿ ಶಾಂತಿಗೋಡು ನಿವಾಸಿ ರಂಜಿತ್ ಎಂಬವರ ಮೇಲೆ ಮುಸುಕುದಾರಿಗಳ ತಂಡ ಹಲ್ಲೆ ನಡೆಸಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ಸವಣೂರಿನಲ್ಲಿರುವ ತನ್ನ ಅಜ್ಜಿ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿಕೊಂಡು 2 ಬೈಕ್ ನಲ್ಲಿ ಬಂದ ಮುಸುಕುದಾರಿಗಳು ಸರ್ವೆ ದೇವಸ್ಥಾನಕ್ಕೆ ಹೋಗುವ ತಿರುವಿನಲ್ಲಿ ರಂಜಿತ್ ಅವರ ಬೈಕ್ ತಡೆದು ಹಲ್ಲೆ ನಡೆಸಿದ್ದಾರೆ. ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು ಆ ಸಮಯದಲ್ಲಿ ಕಾಲಿನಿಂದ ತುಳಿದು ತಲವಾರ್ ಛಳಪಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರ್ಚ್ ನಾಲ್ಕರ ತಡರಾತ್ರಿ ಘಟನೆ ನಡೆದಿದ್ದು ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ.

Leave A Reply

Your email address will not be published.